     ಮೂಲದೊಡನೆ ಪರಿಶೀಲಿಸಿ

ಎಕ್ಸ್‍ಕಿರಣಗಳು
	ವಿದ್ಯುತ್ಕಾಂತ ತರಂಗಗಳಲ್ಲಿ ಸೇರಿವೆ (ಎಕ್ಸ್‍ರೇಸ್). ಇವುಗಳಲ್ಲಿ ನಿಯತಕಾಲಿಕವಾಗಿ ಬದಲಾಯಿಸುವ ವಿದ್ಯುತ್ ಮತ್ತು ಕಾಂತಕ್ಷೇತ್ರಗಳು ಪರಸ್ಪರವಾಗಿಯೂ ಪ್ರಸಾರದಿಕ್ಕಿಗೂ ಲಂಬವಾಗಿವೆ. ಪರ್ಯಾಯನಾಮ ರಂಟ್‍ಜನ್ ಕಿರಣಗಳು, ನಿಸರ್ಗದಲ್ಲಿ ಇವು ಬೆಳಕು ಮತ್ತು ವಿದ್ಯುತ್ಕಾಂತ ತರಂಗಗಳ ಇತರ ರೂಪಗಳಿಗೆ ಸರ್ವಸಮವಾಗಿವೆ (ಅತಿರಕ್ತ, ಅತಿನೇರಿಳೆ, ಅತಿಸೂಕ್ಷ್ಮ ಇತ್ಯಾದಿ ತರಂಗಗಳು).

ಐತಿಹಾಸಿಕ ಹಿನ್ನಲೆ: ಜರ್ಮನಿಯ ವುರ್ಜಿಬರ್ಗ್ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕನಾಗಿದ್ದ ವಿಲ್‍ಹೆಲ್ಮ್ ಕಾನ್ರಾಡ್ ರಂಟ್‍ಜನ್ (1845-1923) (ನೋಡಿ- ವಿಲ್‍ಹೆಲ್ಮ್,-ಕಾನ್ರಾಡ್-ರಂಟ್‍ಜನ್) 1895ರ ನವೆಂಬರ್ ತಿಂಗಳಲ್ಲಿ ಆಕಸ್ಮಿಕವಾಗಿ ಎಕ್ಸ್‍ಕಿರಣಗಳನ್ನು ಕಂಡುಹಿಡಿದ. ಕ್ಯಾಥೋಡ್ ಕಿರಣಗಳನ್ನು ಅಭ್ಯಸಿಸುತ್ತಿದ್ದ ಪ್ರಪಂಚದ ವಿವಿಧ ಪ್ರಯೋಗಶಾಲೆಗಳಲ್ಲಿ ಎಕ್ಸ್‍ಕಿರಣಗಳಿದ್ದರೂ ಅಲ್ಲಿನ ವಿe್ಞÁನಿಗಳ ಗಮನಕ್ಕೆ ಅವು ಬಂದಿರಲಿಲ್ಲ. ಆಗಿನ ಭೌತ ಪ್ರಯೋಗಶಾಲೆಗಳಲ್ಲಿ ತೀವ್ರ ಗತಿಯಿಂದ ಸಂಶೋಧನೆ ನಡೆಯುತ್ತಿದ್ದುದು ಕ್ಯಾಥೋಡ್ ಕಿರಣಗಳಲ್ಲಿ. ಅಂತೆಯೇ ರಂಟ್‍ಜನ್ 1804ನೆಯ ಜೂನ್ ಮಾಸ ಕಳೆದಮೇಲೆ ಪ್ರಯೋಗಶಾಲೆಯಲ್ಲಿ ಈ ದಿಶೆಯಲ್ಲಿ ಸಂಶೋಧನೆ ಪ್ರಾರಂಭಿಸಿದ. ಅತಿ ಕಡಿಮೆ ಒತ್ತಡದ ಅನಿಲವಿರುವ ಗೈಸ್ಲರ ಕೊಳವೆಯ ಮೂಲಕ ವಿದ್ಯುತ್ಪ್ರೇರಕ ಸುರುಳಿಯಿಂದ ಉತ್ಪತ್ತಿ ಮಾಡಲಾದ ಹೆಚ್ಚಿನ ವಿಭವಾಂತರದಲ್ಲಿ ವಿದ್ಯುತ್ ಹರಿಯುವಂತೆ ಮಾಡಿದರೆ ಋಣವಿದ್ಯುತ್ ಧ್ರುವದ ಕಡೆಯಿಂದ ಧನವಿದ್ಯುತ್ ಕಡೆಗೆ ಅತಿಸೂಕ್ಷ್ಮ ಕಣಗಳಾದ ಕ್ಯಾಥೋಡ್ ಕಿರಣಗಳು ಚಲಿಸುವ ವಿಷಯ ರಂಟ್‍ಜನ್ ಈ ರಂಗಕ್ಕೆ ಕಾಲಿಡುವ ಮುನ್ನವೇ ತಿಳಿದಿತ್ತು. (ನೋಡಿ- ಅಧೋವಾಟ-ಕಿರಣಗಳು). ಜರ್ಮನಿ ದೇಶದ ಜೆ.ಪ್ಲಕ್ಕರ್ 1858-62ರ ವರೆಗೂ ಸತತವಾಗಿ ಕ್ಯಾಥೋಡ್ ಕಿರಣಗಳ ಗುಣಗಳನ್ನು ತಿಳಿಯಲು ಪ್ರಯೋಗ ಮಾಡುತ್ತಿದ್ದ. ಈ ಕಿರಣಗಳಿಂದ ಗಾಜಿನ ಕೊಳವೆ ಹೊಳೆಯುವುದನ್ನು (ಗ್ಲೋ) 1858ರಲ್ಲಿ ಅವನು ನೋಡಿದ. ಹೊಳಪಿನ ಸ್ಥಳವನ್ನು ಅಯಸ್ಕಾಂತದಿಂದ ಬದಲಾಯಿಸಬಹುದೆಂಬುದನ್ನೂ ತಿಳಿದ. ಕ್ಯಾಥೋಡ್ ಕಿರಣಗಳ ವಿವಿಧ ಭೌತಗುಣಗಳನ್ನು ತಿಳಿಯಲು ಹಿಲರ್ಫ್, ಗೋಲ್ಡ್‍ಸ್ಟೈಟಾವನ್, ವಿಲಿಯಂ ಕ್ರೂಕ್ಸ್, ಹಟ್ರ್ಸ್, ಲೆನಾರ್ಡ್ ಮುಂತಾದವರು ಮಾಡಿದ್ದ ಎಲ್ಲ ಪ್ರಯೋಗಗಳನ್ನೂ ರಂಟ್‍ಜನ್ ಪುನಃ ಮಾಡಲು ಪ್ರಾರಂಭಿಸಿದ. ಮೇಲಿನ ಪ್ರಯೋಗಗಳಿಂದ ಕ್ಯಾಥೋಡ್ ಕಿರಣಕೊಳವೆಯಲ್ಲಿ ವಿದ್ಯುತ್ ಹರಿಯುವಾಗ ಅದರ ಪಕ್ಕದಲ್ಲಿಟ್ಟಿರುವ ಬೇರಿಯಂ ಪ್ಲಾಟಿನೊಸಯನೈಡ್ ಲೇಪನವಿರುವ ತೆರೆ ಮಿನುಗುವುದೆಂಬ ಫಲಿತಾಂಶ ರಂಟ್‍ಜನ್ನನ ಗಮನವನ್ನು ಸೆಳೆಯಿತು. ಈ ಪ್ರಯೋಗ ಪುನಃ ಮಾಡಲು ಗೈಸ್ಲರ್ ಕೊಳವೆಯನ್ನು ಕತ್ತಲೆ ಕೋಣೆಯಲ್ಲಿರಿಸಿರುವ ಒಂದು ಕಪ್ಪು ಪೆಟ್ಟಿಗೆಯ ಒಳಗಡೆ ಇರಿಸಿದ. ಕೊಳವೆಯನ್ನು ವಿದ್ಯುತ್ಪ್ರೇರಕ ಸುರುಳಿಗೆ ಸೇರಿಸಿ ವಿದ್ಯುತ್ಪ್ರವಾಹವಾಗುವಂತೆ ಮಾಡಿದಾಗ ಕೊಳವೆಯಿಂದ ಸುಮಾರು ಎರಡು ಮೀಟರ್ ದೂರದಲ್ಲಿರುವ ಬೇರಿಯಂ ಪ್ಲಾಟಿನೊಸಯನೈಡ್ ಲೇಪನವಿರುವ ಕಾಗದದ ಹಾಳೆ ಮಿನುಗುವುದು ಕಂಡಿತು. ಇಷ್ಟುದೂರ ಕ್ಯಾಥೋಡ್ ಕಿರಣಗಳು ಚಲಿಸಲಾರವು. ಆದ್ದರಿಂದ ಕ್ಯಾಥೋಡ್ ಕಿರಣಗಳು ಗಾಜಿಗೆ ತಾಕಿ ಒಂದು ರೀತಿಯ ತೀಕ್ಷ್ಣಕಿರಣ ಉತ್ಪತ್ತಿಯಾಗುವುದೆಂದು ರಂಟ್‍ಜನ್ ಸಾಧಿಸಿದ. ಕಿರಣಗಳ ಸ್ವರೂಪ ತಿಳಿಯದಿದ್ದುದರಿಂದ ಅವನ್ನು ಎಕ್ಸ್‍ಕಿರಣಗಳೆಂದು ಹೆಸರಿತ್ತ. ಪೆಟ್ಟಿಗೆಯಿಂದ ಇನ್ನೂ ಹೊರತೆಗೆಯದೆ ಇರುವ ಛಾಯಾ ಚಿತ್ರಫಲಕಗಳು, ಕ್ಯಾಥೋಡ್ ಕಿರಣಕೊಳವೆಯಿರುವ ಕೊಠಡಿಯಲ್ಲಿಟ್ಟಾಗ ಮಸಕಾಗುವುದನ್ನು ಇಂಗ್ಲೆಂಡಿನ ವಿಲಿಯಂ ಕ್ರುಕ್ಸ್ ಮತ್ತು ಎಫ್.ಜೆರ್‍ವಿಸ್ ಸ್ಮಿತ್ ನೋಡಿದ್ದರು. ಇಂಥದೇ ಒಂದು ರೀತಿಯ ಪರಿಣಾಮವನ್ನು 1890ರಲ್ಲಿ ಅಮೆರಿಕದ ಗುಡ್‍ಸ್ಪೀಡ್ ಎಂಬುವನೂ ನೋಡಿದ್ದ. ಆದರೆ ಅವು ಎಕ್ಸ್‍ಕಿರಣಗಳಿಂದ ಉಂಟಾದ ಪರಿಣಾಮಗಳೆಂದು ಅವರಿಗಂದು ತಿಳಿಯಲಿಲ್ಲ. ಆದ್ದರಿಂದ ಎಕ್ಸ್‍ಕಿರಣ ತುಂಡಿಗೆ ಅಥವಾ ಇನ್ನಾವುದಾದರೂ ವಸ್ತುವಿನ ಮೇಲೆ ಬಡಿದು ನಿಲ್ಲುವಂತೆ ಮಾಡಿದರೆ ಹೊರಹೊಮ್ಮುವ ಎಕ್ಸ್‍ಕಿರಣಗಳ ಅಧ್ಯಯನ ತತ್‍ಕ್ಷಣವೇ ಪ್ರಪಂಚದ ಸುಮಾರು ಎಲ್ಲ ಪ್ರಯೋಗಶಾಲೆಗಳಲ್ಲಿಯೂ ಪ್ರಾರಂಭವಾಯಿತು. ಈ ಸಂಶೋಧನೆ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ ಕಂಡುಹಿಡಿದ ಒಂದು ವರ್ಷದ ಅವಧಿಯಲ್ಲೇ ಎಕ್ಸ್‍ಕಿರಣಗಳನ್ನು ಕುರಿತು 49 ಪುಸ್ತಕಗಳೂ ವಿe್ಞÁನ ನಿಯತಕಾಲಿಕೆಗಳಲ್ಲಿ 1000ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಲೇಖನಗಳೂ ಪ್ರಕಟವಾದುವು. ಎಕ್ಸ್‍ಕಿರಣ ಸಂಶೋಧನೆಯಿಂದ ಪರಮಾಣು ಭೌತಶಾಸ್ತ್ರದಲ್ಲಿ ಒಂದು ಹೊಸ ಅಧ್ಯಾಯವೇ ಪ್ರಾರಂಭವಾಯಿತು.

ಎಕ್ಸ್‍ಕಿರಣಗಳ ಉತ್ಪಾದನೆ : ರಂಟ್‍ಜನ್ ಉಪಯೋಗಿಸಿದ ಉಪಕರಣಗಳನ್ನು ಚಿತ್ರದಲ್ಲಿ ತೋರಿಸಿದೆ. ಃ ಗಾಜಿನ ಕೊಳವೆ. ಇದರಲ್ಲಿದ್ದ ಗಾಳಿಯನ್ನೆಲ್ಲ ವಾಯುರೇಚಕದ ಸಹಾಯದಿಂದ ತೆಗೆದು ಅದರಲ್ಲಿರುವ ಒತ್ತಡ ಅತಿ ಕಡಿಮೆಯಾಗದಂತೆ ಮಾಡಿದೆ.  ಂ ಮತ್ತು ಅ ಅನುಕ್ರಮವಾಗಿ ಆನೋಡ್ ಮತ್ತು ಕ್ಯಾಥೋಡ್ (ಧನ ಮತ್ತು ಋಣ ವಿದ್ಯುತ್ ಧ್ರುವಗಳು). 

ಚಿತ್ರ-1

ಇವುಗಳ ನಡುವೆ 40,000 ವೋಲ್ಟ್ ವಿಭವಾಂತರವನ್ನುಂಟುಮಾಡಿ ಕೊಳವೆಯಲ್ಲಿ ವಿದ್ಯುದ್ವಿಸರ್ಜನೆಯಾಗುವಂತೆ ಮಾಡಿದಾಗ ಕ್ಯಾಥೋಡಿನಿಂದ ಹೊರಬಂದ ಕ್ಯಾಥೋಡ್ ಕಿರಣಗಳು ಕೊಳವೆಯ ಅಗಲವಾದ ಪ್ರದೇಶದ ಮೇಲೆ ಬಿದ್ದು ವಿಶೇಷವಾದ ಹೊಳಪನ್ನುಂಟುಮಾಡುವುದರ ಜೊತೆಗೆ ಎಕ್ಸ್‍ಕಿರಣಗಳ ಉತ್ಪಾದನೆಗೆ ಕಾರಣವಾಯಿತು. ಯಾವ ವಸ್ತುವೇ ಆಗಲಿ ಅದರ ಮೇಲೆ ಕ್ಯಾಥೋಡ್ ಕಿರಣಗಳು ಬಿದ್ದಾಗ ಎಕ್ಸ್‍ಕಿರಣಗಳು ಉತ್ಪತ್ತಿಯಾಗುವುದೆಂಬ ಅಂಶ ಹೇಗೆ ವ್ಯಕ್ತವಾಗುತ್ತದೆ. ವಸ್ತು ಹೆಚ್ಚಿನ ಪರಮಾಣು ಭಾರವುಳ್ಳದ್ದಾಗಿದ್ದ ಪಕ್ಷದಲ್ಲಿ ಉತ್ಪತ್ತಿಯಾಗುವ ಎಕ್ಸ್‍ಕಿರಣಗಳ ತೀಕ್ಷ್ಣತೆಯೂ ಹೆಚ್ಚಾಗಿರುತ್ತದೆ.

	ಇದೇ ರೀತಿಯಲ್ಲಿ ಸ್ವಲ್ಪ ಬದಲಾವಣೆಗಳನ್ನೊಳಗೊಂಡ ಅಲ್ಪ ಒತ್ತಡ ಅನಿಲಪೂರಿತ (ಲೋಪ್ರೆಶ್ಯರ್ ಗ್ಯಾಸ್ ಫಿಲ್ಡ್) ವಿದ್ಯುದ್ವಿಸರ್ಜಕ ಕೊಳವೆಯನ್ನು ತಯಾರಿಸಲಾಯಿತು. ಕ್ಯಾಥೋಡನ್ನು ನಿಮ್ನವಾಗಿರುವಂತೆ (ಕಾನ್‍ಕೇವ್ ಕ್ಯಾಥೋಡ್) ಮಾಡಿದಾಗ ಅದರಿಂದ ಹೊರಬಂದ ಕ್ಯಾಥೋಡ್ ಕಿರಣಗಳು ಒಂದು ಬಿಂದುವಿನಲ್ಲಿ ಕೇಂದ್ರೀಕೃತವಾಗಲು ಸಹಾಯವಾಗುತ್ತದೆ. ಈ ಬಿಂದು ಒಂದು ಗುರಿಯ (ಟಾರ್ಗೆಟ್) ಮೇಲಿರುವಂತೆ ಅಳವಡಿಸಿ ಎಕ್ಸ್‍ಕಿರಣಗಳನ್ನು ಉತ್ಪಾದಿಸಬಹುದು. ಗುರಿಯ ಮೇಲೆ ಕ್ಯಾಥೋಡ್ ಕಿರಣಗಳು ಕೇಂದ್ರೀಕೃತವಾದಾಗ ಅಲ್ಲಿ ಉಷ್ಣತೆ ಏರಿ ಲೋಹ ಕರಗಬಹುದು. ಆದ್ದರಿಂದ ಅತಿ ಹೆಚ್ಚಿನ ಕರಗುವ ಬಿಂದು ಇರುವ ಟಂಗ್‍ಸ್ಟನ್ ಅಥವಾ ಪ್ಲಾಟಿನಂ ಲೋಹದಿಂದ ಮಾಡಿದ ಗುರಿಯನ್ನು ಹೆಚ್ಚು ತೂಕವುಳ್ಳ ತಾಮ್ರದ ತುಂಡಿನಲ್ಲಿ (ಬ್ಲಾಕ್) ಸರಿಯಾದ ಸ್ಥಾನದಲ್ಲಿಡಬೇಕು. 

ಚಿತ್ರ-2

ಇದರಿಂದ ಉತ್ಪತ್ತಿಯಾದ ಉಷ್ಣ ಚದರಲು ಸಹಾಯವಾಗುತ್ತದೆ. ತಾಮ್ರದ ತುಂಡನ್ನು ಆಂಟಿಕ್ಯಾಥೋಡ್ ಎಂದು ಕರೆಯುವುದುಂಟು. ಆನೋಡನ್ನು ಕೊಳವೆಯ ಒಂದು ಭಾಗದಲ್ಲಿ ಅಳವಡಿಸಿ ಆಂಟಿಕ್ಯಾಥೋಡಿಗೆ ತಂತಿಯ ಮೂಲಕ ಸೇರಿಸಬೇಕು. ಆನೋಡ್ ಮತ್ತು ಕ್ಯಾಥೋಡುಗಳ ನಡುವೆ ಪ್ರಯೋಗ ಮಾಡುವ ವಿಭವಾಂತರ ಕೊಳವೆಯಲ್ಲಿರುವ ಅನಿಲದ ಒತ್ತಡವನ್ನು ಅವಲಂಬಿಸುತ್ತದೆ. ಅನಿಲದ ಒತ್ತಡ ಕಡಿಮೆ ಇದ್ದಾಗ ಎಕ್ಸ್‍ಕಿರಣಗಳು ಉತ್ಪತ್ತಿಯಾಗಬೇಕಾದರೆ ಹೆಚ್ಚಿನ ವಿಭವಾಂತರ ಬೇಕಾಗುವುದು. ಈ ರೀತಿಯಲ್ಲಿ ಉತ್ಪತ್ತಿಯಾದ ಎಕ್ಸ್‍ಕಿರಣಗಳನ್ನು ಗಡಸು ಎಕ್ಸ್‍ಕಿರಣಗಳೆಂದು (ಹಾರ್ಡ್ ಎಕ್ಸ್‍ರೇಸ್) ಎಂದು ಕರೆಯುವರು. ಒತ್ತಡ ಕಡಿಮೆಯಿಲ್ಲದಿದ್ದಾಗ ಎಕ್ಸ್‍ಕಿರಣಗಳ ಉತ್ಪಾದನೆಗೆ ಬೇಕಾಗುವ ವಿಭವಾಂತರ ಕಡಿಮೆ ಪ್ರಮಾಣವುಳ್ಳದ್ದು. ಈ ಕಿರಣಗಳನ್ನು ಮೃದು ಎಕ್ಸ್‍ಕಿರಣಗಳೆಂದು (ಸಾಫ್ಟ್ ಎಕ್ಸ್‍ರೇಸ್) ಕರೆಯುವರು. ಇವುಗಳ ಶಕ್ತಿಯೂ ಕಡಿಮೆ, ಕೊಳವೆಯನ್ನು ಉಪಯೋಗಿಸುತ್ತ ಹೋದಂತೆ ಅನಿಲದ ಒತ್ತಡ ಕಡಿಮೆಯಾಗುತ್ತ ಕೊನೆಗೆ ಕಿರಣ ಕಠಿಣವಾಗುತ್ತದೆ. P ಎಂಬ ಪಾಶ್ರ್ವ ಕೊಳವೆಯಲ್ಲಿ ಕಲ್ನಾರು ಅಥವಾ ಹೈಡ್ರೊಜನಿನಿಂದ ಕೂಡಿದ ಪೆಲೇಡಿಯಂ ವಸ್ತುವನ್ನಿಟ್ಟು ಕ್ಯಾಥೋಡಿನೊಡನೆ ಸಂಪರ್ಕ ಹೊಂದುವಂತೆ ಮಾಡಿದಾಗ ಎಕ್ಸ್‍ಕಿರಣ ಕೊಳವೆ ಮೃದುವಾಗುತ್ತದೆ. 

ಚಿತ್ರ-3

ಈ ತೊಡಕನ್ನು ನಿವಾರಿಸಲು ಕೂಲಿಡ್ಜ್ ಎಂಬ ವಿe್ಞÁನಿ ಮತ್ತೊಂದು ಎಕ್ಸ್‍ಕಿರಣ ಕೊಳವೆಯನ್ನು ರಚಿಸಿದ. ಈ ಟಂಗ್‍ಸ್ಟನ್ ತಂತಿ. ಇದರ ತುದಿಗಳನ್ನು ಃ ವಿದ್ಯುತ್‍ಕೋಶದ ಧ್ರುವಗಳಿಗೆ ಸೇರಿಸಿದೆ. ಖಿ ಗುರಿ, ಇದನ್ನು ತಾಮ್ರದ ತುಂಡಿನಲ್ಲಿ ಅಳವಡಿಸಿದೆ. ತುಂಡಿನ ಸ್ವಲ್ಪ ಭಾಗ ಕೊಳವೆಯ ಹೊರಗಿರಬೇಕು. ಕೊಳವೆಯ ಒಳಭಾಗ ಶೂನ್ಯಪ್ರದೇಶವಾಗಿರಬೇಕು. ಟಂಗಸ್ಟನ್ ತಂತಿಯ ಮೂಲಕ ವಿದ್ಯುತ್ ಹರಿದಾಗ ಎಲೆಕ್ಟ್ರಾನುಗಳು ಹೊರಬೀಳುತ್ತವೆ. ಇವು ಗುರಿಯ ಮೇಲೆ ಬಿದ್ದಾಗ ಎಕ್ಸ್‍ಕಿರಣಗಳು ಉತ್ಪತ್ತಿಯಾಗುತ್ತದೆ. ತಾಮ್ರದ ತುಂಡಿನ ಸುತ್ತಲೂ ತಣ್ಣೀರು ಹರಿಯುವಂತೆ ಅಳವಡಿಸಿ ವಿದ್ಯುತ್‍ಕಣಗಳು ಗುರಿಯ ಮೇಲೆ ಬಿದ್ದಾಗ ಉಂಟಾಗುವ ಉಷ್ಣವನ್ನು ಹೀರುವಂತೆ ಮಾಡಿರುತ್ತಾರೆ. ಈ ಎಕ್ಸ್‍ಕಿರಣಗಳು ಕೊಳವೆಯನ್ನು ಉದ್ದೀಪಿಸಲು (ಎಕ್ಸೈಟ್) ಆವಶ್ಯಕವಾದ ವಿಭವಾಂತರವನ್ನು ವೋಲ್ಟೇಜ್ ವರ್ಧಿಸುವ ಪರಿವರ್ತಕದಿಂದ (ಸ್ಟೆಪ್ ಅಪ್ ಟ್ರಾನ್ಸ್‍ಫಾರ್ಮರ್) ಉಂಟುಮಾಡುತ್ತಾರೆ.

ಎಕ್ಸ್‍ಕಿರಣಗಳ ಗುಣ ಲಕ್ಷಣಗಳು :	1. ಇವು ಬೆಳಕಿನಂತೆ ವಿದ್ಯುತ್ಕಾಂತ ತರಂಗಗಳ ಗುಂಪಿಗೆ ಸೇರಿವೆ. 2. ಎಕ್ಸ್‍ಕಿರಣಗಳ ತರಂಗಾಂತರ (ವೇವ್ ಲೆಂತ್) ಅತಿಹ್ರಸ್ವ (5(10-9-6(10-12 ಮೀಟರ್). ಆದ್ದರಿಂದ ಇವಕ್ಕೆ ಅಧಿಕ ಶಕ್ತಿ ಇದೆ. 3. ವಿದ್ಯುತ್ ಕ್ಷೇತ್ರದಲ್ಲಾಗಲೀ ಅಯಸ್ಕಾಂತ ಕ್ಷೇತ್ರದಲ್ಲಾಗಲೀ ಇವು ಬಾಗುವುದಿಲ್ಲ. ಇದರಿಂದ ಎಕ್ಸ್ ಕಿರಣಗಳು ಧ್ರುವೀಕರಣ (ಪೋಲರೈಸೇಷನ್) ಮತ್ತು ನಮನ (ಡಿಫ್ರಾಕ್ಷನ್)ಗೊಳ್ಳುತ್ತವೆ. 

ಚಿತ್ರ-4

	ಎಕ್ಸ್‍ಕಿರಣಗಳ ಅತಿ ಮುಖ್ಯವಾದ ಗುಣಗಳೆಂದರೆ ತೀವ್ರತೆ (ಇಂಟೆನ್ಸಿಟಿ) ಮತ್ತು ಭೇದನ ಸಾಮಥ್ರ್ಯ (ಪೆನೆಟ್ರೇಟಿಂಗ್ ಪವರ್). ಎಕ್ಸ್‍ಕಿರಣಗಳ ತೀವ್ರತೆಯನ್ನು ಅಯಾನೀಕರಣ ವಿಧಾನದಿಂದ ಗೊತ್ತುಪಡಿಸಬಹುದು. ಎಕ್ಸ್‍ಕಿರಣಗಳು ಅನಿಲಗಳ ಮೂಲಕ ಹಾದುಹೋಗುವಾಗ ಅನಿಲದ ಅಣುಗಳನ್ನು ಧನ ಮತ್ತು ಋಣವಿದ್ಯುತ್ ಅಯಾನುಗಳನ್ನಾಗಿ ವಿಭಜಿಸುತ್ತವೆ. ಇದಕ್ಕೆ ಅಯಾನೀಕರಣವೆಂದು ಹೆಸರು. ಚಿತ್ರದಲ್ಲಿ ತೋರಿಸಿರುವಂತೆ ಹಿತ್ತಾಳೆಯ ಪೆಟ್ಟಿಗೆಯ ಒಂದು ಭಾಗವನ್ನು ಅಲ್ಯೂಮಿನಿಯಂ ಲೋಹದ ತೆಳುವಾದ ಹಾಳೆಯಿಂದ ಮುಚ್ಚಿದೆ. ಮತ್ತೊಂದು ಭಾಗದಲ್ಲಿ ವಿದ್ಯುತ್‍ನಿರೋಧಕ ಬಿರಡೆಯ (ಇನ್ಸುಲೇಟೆಡ್ ಕಾರ್ಕ್) ಮೂಲಕ ಒಂದು ತಂತಿಯನ್ನು ತೂರಿಸಿ ಅದನ್ನು ವಿದ್ಯುನ್ಮಾಪಕಕ್ಕೆ (ಎಲೆಕ್ಟ್ರೊಮೀಟರ್ ಇ) ಸೇರಿಸಿದೆ. 100 ವೋಲ್ಟ್ ವಿಭವಾಂತರವನ್ನುಂಟುಮಾಡಿ ಅಲ್ಯೂಮಿನಿಯಂ ಹಾಳೆಯ ಮೂಲಕ ಎಕ್ಸ್‍ಕಿರಣಗಳನ್ನು ಅಯಾನೀಕರಣ ಮಂದಿರದೊಳಗೆ (I) ಹಾಯಿಸಿದಾಗ ಅದರಲ್ಲಿರುವ ಅಣುಗಳು ಧನ ಮತ್ತು ಋಣ ವಿದ್ಯುತ್ ಅಯಾನುಗಳಾಗಿ ವಿಭಜನೆಗೊಳ್ಳುತ್ತವೆ. ಧನ ವಿದ್ಯುತ್ ಅಯಾನುಗಳು ಋಣವಿದ್ಯುತ್ ಹೊಂದಿರುವ ತಂತಿಯ ಕಡೆಗೆ ಸಾಗುತ್ತವೆ. 

ಚಿತ್ರ-5

ಅಯಾನೀಕರಣ ವಿದ್ಯುತ್ ಪ್ರಮಾಣವನ್ನು (ಅಯನೈಸೇóಷನ್ ಕರೆಂಟ್) ವಿದ್ಯುನ್ಮಾಪಕದಿಂದ ಅಳೆಯಬಹುದು. ವಿದ್ಯುತ್ ಧ್ರುವಗಳ ನಡುವೆ ಪ್ರಯೋಗ ಮಾಡುವ ವಿಭವಾಂತರ ಪ್ರಮಾಣವನ್ನು x-ಅಕ್ಷದ ಮೇಲೂ ಅಯಾನೀಕರಣ ವಿದ್ಯುತ್ ಪ್ರಮಾಣವನ್ನು ಥಿ- ಅಕ್ಷದ ಮೇಲೂ ಸೂಚಿಸಿ ಚಿತ್ರ ರಚಿಸಿದರೆ ಚಿತ್ರ 5ರಲ್ಲಿ ತೋರಿಸಿರುವಂತೆ ರೇಖಾಚಿತ್ರ ಬರುತ್ತದೆ.

	ವಿಭವಾಂತರ ಪ್ರಮಾಣ ಹೆಚ್ಚಿದಂತೆಲ್ಲ ಅಯಾನೀಕರಣ ವಿದ್ಯುತ್ ಹೆಚ್ಚುತ್ತ ಒಂದು ಪರ್ಯಾಪ್ತ ಮಿತಿಯನ್ನು (ಸ್ಯಾಚುರೇಷನ್ ಲಿಮಿಟ್) ಪಡೆಯುತ್ತದೆ. ಇದರಿಂದ ಅಯಾನೀಕರಣ ಮಂದಿರದಲ್ಲಿ ಉಂಟಾಗುವ ವಿದ್ಯುತ್ ಅಯಾನುಗಳ ಸಂಖ್ಯೆ ಎಕ್ಸ್‍ಕಿರಣಗಳ ತೀಕ್ಷ್ಣತೆಯನ್ನು ಅವಲಂಬಿಸುತ್ತದೆ ಎಂಬ ಅಂಶ ವ್ಯಕ್ತವಾಗುತ್ತದೆ.
ವಸ್ತುಗಳ ಎಕ್ಸ್‍ಕಿರಣಗಳನ್ನು ಹೀರುವ ಸಾಮಥ್ರ್ಯ: (ಅಬ್-ಸಾಪ್ರ್ಟಿವ್ ಪವರ್): ಇದು ಎಕ್ಸ್‍ಕಿರಣ ಕೊಳವೆಯಲ್ಲಿ ಉಪಯೋಗಿಸುವ ವಿಭವಾಂತರ ಪ್ರಮಾಣ ಮತ್ತು ಹೀರಿಕೊಳ್ಳುವ ವಸ್ತುವಿನ ಪರಮಾಣು ಸಂಖ್ಯೆಯನ್ನು ಅವಲಂಬಿಸಿದೆ. ಹೆಚ್ಚಿನ ಪರಮಾಣು ಸಂಖ್ಯೆಯುಳ್ಳ ವಸ್ತುವಿನ ಮೂಲಕ ಎಕ್ಸ್‍ಕಿರಣಗಳು ಹಾದುಹೋಗುವ ದೂರ ಕಡಿಮೆ. ವಸ್ತುಗಳ ಮೂಲಕ ಎಕ್ಸ್‍ಕಿರಣಗಳು ಹಾದುಹೋದಾಗ ದ್ವಿತೀಯ ವರ್ಗದ (ಸೆಕೆಂಡರಿ) ಎಕ್ಸ್‍ಕಿರಣಗಳು ಮತ್ತು ದ್ವಿತೀಯ ವರ್ಗದ ಎಲೆಕ್ಟ್ರಾನುಗಳು ಉತ್ಪತ್ತಿಯಾಗುವುವು. ಎಕ್ಸ್‍ಕಿರಣಗಳ ತೀವ್ರತೆ ಪ್ರಥಮವರ್ಗದ ಎಕ್ಸ್‍ಕಿರಣಗಳ ತೀವ್ರತೆಗಿಂತ ಕಡಿಮೆಯಾಗಿರುತ್ತದೆ. ದ್ವಿತೀಯ ವರ್ಗದ ಎಕ್ಸ್‍ಕಿರಣಗಳಲ್ಲಿ ಎರಡು ವಿಧ : 1. ಚದುರಿದ ಎಕ್ಸ್‍ಕಿರಣಗಳು (ಸ್ಕ್ಯಾಟರ್ಡ್ ಎಕ್ಸ್‍ರೇಸ್) 2. ಪ್ರತಿದೀಪ್ತಿ ಕಿರಣಗಳು (ಫ್ಲೂರಸೆಂಟ್ ರೇಸ್).

	ಚದುರಿದ ಎಕ್ಸ್‍ಕಿರಣಗಳ ತರಂಗಾಂತರ ಪ್ರಥಮ ವರ್ಗದ ಕಿರಣಗಳ ತರಂಗಾಂತರವನ್ನು ಅವಲಂಬಿಸಿದೆ. ಆದರೆ ಇದರ ಉತ್ಪತ್ತಿಗೆ ಕಾರಣವಾದ ವಸ್ತುವನ್ನು ಅವಲಂಬಿಸಿರುವುದಿಲ್ಲ. ಪ್ರತಿದೀಪ್ತಗಳು ಪ್ರಥಮವರ್ಗದ ಕಿರಣಗಳ ತರಂಗಾಂತರವನ್ನವಲಂಬಿಸಿದ ವಸ್ತುವನ್ನೇ ಅವಲಂಬಿಸುತ್ತವೆ. ಇವು ಆ ವಸ್ತುವಿನ ವೈಶಿಷ್ಟ್ಯವನ್ನು ಸೂಚಿಸುತ್ತವೆ.

	ಎಕ್ಸ್‍ಕಿರಣಗಳನ್ನು ವಿದ್ಯುತ್ಕಾಂತ ತರಂಗಗಳೆಂದು ಭಾವಿಸಿದರೆ ಅಂಥ ತರಂಗಗಳು ವಸ್ತುವಿನ ಮೇಲೆ ಬಿದ್ದಾಗ ಅದರ ಪರಮಾಣುಗಳು ಎಲೆಕ್ಟ್ರಾನುಗಳಲ್ಲಿ ವೇಗೋತ್ಕರ್ಷವನ್ನುಂಟುಮಾಡುತ್ತವೆ. ವಿದ್ಯುತ್ ಅಂಶವುಳ್ಳ ಈ ಕಣ ತರಂಗದ ವಿದ್ಯುತ್‍ಕ್ಷೇತ್ರದಲ್ಲಿ ವಿಕಿರಣ (ರೇಡಿಯೇಟ್) ಸೂಸಬೇಕು. ಎಲೆಕ್ಟ್ರಾನುಗಳು ಪ್ರಥಮ ವರ್ಗದ ಕಿರಣಗಳ ಪ್ರಭಾವದಲ್ಲಿ ಶಕ್ತಿ ಪ್ರಸಾರ ಮಾಡಬೇಕು. ಇದೇ ಚದರಿದ ಕಿರಣಗಳ ಉತ್ಪತ್ತಿಗೆ ಕಾರಣವಾಗುವುದು. ಎಕ್ಸ್‍ಕಿರಣಗಳು ವಸ್ತುಗಳ ಮೂಲಕ ಹಾದುಹೋದಾಗ ಅದರ ಶಕ್ತಿಯ ಸ್ವಲ್ಪಭಾಗ ವಸ್ತುವಿನಿಂದ ಎಲೆಕ್ಟ್ರಾನುಗಳನ್ನು ಹೊರದೂಡಲು ವ್ಯಯವಾಗುತ್ತದೆ. ಎಲೆಕ್ಟ್ರಾನನ್ನು ಕಳೆದುಕೊಂಡ ಪರಮಾಣು ಅಯಾನೀಕರಣ ಸ್ಥಿತಿಯಲ್ಲಿ ಇರುತ್ತದೆ. ಅದು ಪುನಃ ಮೊದಲಿನ ಸ್ಥಿತಿಗೆ ಬರುವ ಪ್ರಯತ್ನದಲ್ಲಿ ಶಕ್ತಿಯನ್ನು ಪ್ರಸರಿಸುತ್ತದೆ. ಇದೇ ದೃಗ್ಗೋಚರಕಾರೀ ಕಿರಣಗಳ ಉತ್ಪತ್ತಿಗೆ ಕಾರಣ.

	ದ್ಯುತಿ ವಿದ್ಯುತ್ ಪರಿಣಾಮದ (ಪೋಟೋ ಎಲೆಕ್ಟ್ರಿಕ್ ಎಫೆಕ್ಟ್) ಪ್ರಕಾರ ಬೆಳಕು ಕ್ಷಾರೀಯ ಲೋಹಗಳ (ಆಲ್ಕಲಿ ಮೇಟಲ್ಸ್) ಮೇಲೆ ಬಿದ್ದಾಗ ಎಲೆಕ್ಟ್ರಾನುಗಳು ಹೊರ ಬೀಳುತ್ತವೆ. ಇದೇ ರೀತಿ ಎಕ್ಸ್‍ಕಿರಣಗಳೂ ಕ್ಷಾರೀಯ ಲೋಹಗಳ ಮೇಲೆ ಬಿದ್ದಾಗ ಎಲೆಕ್ಟ್ರಾನುಗಳು ಉತ್ಪತ್ತಿಯಾಗುವುವು. ಬೆಳಕಿನಂತೆ ಎಕ್ಸ್‍ಕಿರಣಗಳನ್ನು ಫ್ರೋಟಾನುಗಳು (ಶಕ್ತಿಕಣಗಳು) ಎಂದು ಭಾವಿಸಬಹುದು.  ಕಂಪನ ಸಂಖ್ಯೆಯನ್ನು ಸೂಚಿಸಿದರೆ h ಪ್ಲಾಂಕನ ನಿಯತಾಂಕವಾದರೆ ಕಣದ ಶಕ್ತಿ h. ಅಂದರೆ ಎಕ್ಸ್‍ಕಿರಣಗಳು ಅವುಗಳ ತರಂಗಾಂತರಕ್ಕೆ ಅನುಗುಣವಾದ ಶಕ್ತಿಯನ್ನು ಹೊಂದಿ ಕಣಗಳಂತೆ ವರ್ತಿಸುತ್ತವೆ. ಎಕ್ಸ್‍ಕಿರಣಗಳು ವಸ್ತುವಿನ ಮೂಲಕ ಹಾದುಹೋಗುವಾಗ ಅದರ ಶಕ್ತಿಯ ಸ್ವಲ್ಪಭಾಗ ಎಲೆಕ್ಟ್ರಾನುಗಳನ್ನು ಹೊರಸೂಸುವುದರಲ್ಲಿ ವ್ಯಯವಾಗಿ ಬೇರೆ ದಿಕ್ಕಿನಲ್ಲಿ ಚದರಿಸಲ್ಪಡುತ್ತದೆ. ಚದರಿದ ಎಕ್ಸ್‍ಕಿರಣಗಳ ಕಂಪನ ಸಂಖ್ಯೆ ಅಥವಾ ತರಂಗಾಂತರ ಬದಲಾವಣೆಗೊಂಡಿರುತ್ತದೆ. ಪ್ರಧಾನ ಪ್ರೋಟಾನಿನ ತರಂಗಾಂತರವನ್ನಾಗಲಿ, ಅದು ಹಾದುಹೋಗುವ ವಸ್ತುವನ್ನಾಗಲೀ ಅವಲಂಬಿಸುವುದಿಲ್ಲ. ಒಟ್ಟಿನಲ್ಲಿ ಎಕ್ಸ್‍ಕಿರಣಗಳು ತರಂಗ ಮತ್ತು ಕಣ ಎಂಬ ಎರಡು ರೂಪದಲ್ಲಿವೆಯೆಂದು ಪರಿಗಣಿಸಬಹುದು.
ವಿಶಿಷ್ಟ ಎಕ್ಸ್‍ಕಿರಣಗಳು: ಯಾವುದೇ ಲಕ್ಷ್ಯವಸ್ತುಗಳಿಂದ ಉಂಟಾದ ಎಕ್ಸ್‍ಕಿರಣಗಳ ರೋಹಿತವನ್ನು ಬ್ರ್ಯಾಗ್‍ರೋಹಿತಮಾಪಕದಲ್ಲಿ ಪರೀಕ್ಷಿಸಿದಾಗ ಎರಡು ಮುಖ್ಯಾಂಶಗಳು ಹೊರಬೀಳುತ್ತವೆ. θ ಹೆಚ್ಚಾದಂತೆ ಅಂದರೆ λ ಹೆಚ್ಚಾದಂತೆ ಎಕ್ಸ್‍ಕಿರಣಗಳ ತೀಕ್ಷ್ಣತೆ ಕಡಿಮೆಯಾಗುತ್ತದೆ. ಆದರೆ ಮಧ್ಯೆ ಕೆಲವು ಶಿಖರಗಳು (ಪೀಕ್ಸ್) ಕಾಣುತ್ತವೆ. 

ಚಿತ್ರ-6

 ಅಂದರೆ ಈ ರೋಹಿತ ಸಂತತವಾಗಿದ್ದು ಅದರ ಮೇಲೆ ಕೆಲವು λ ಗಳಲ್ಲಿ ಮಾತ್ರ ಹೆಚ್ಚು ತೀಕ್ಷಣತೆ ಇರುತ್ತದೆ. ಈ λ ಗಳಿರುವ ಕಿರಣಗಳ ಹೆಸರು ವಿಶಿಷ್ಟ ಎಕ್ಸ್‍ಕಿರಣಗಳು (ಕ್ಯಾರೆಕ್ಟರಿಸ್ಟಿಕ್ ಎಕ್ಸ್‍ರೇಸ್). ಇವು ಉಂಟಾಗುವ ಬಗೆ ಹೀಗಿದೆ. ಪರಮಾಣುವಿನ ಬೀಜದ (ನ್ಯೂಕ್ಲಿಯಸ್) ಸುತ್ತ ಎಲೆಕ್ಟ್ರಾನುಗಳು ಸುತ್ತುತ್ತಿವೆ. ಇವು ಕೆಲವು ಕವಚಗಳಲ್ಲಿ (ಶೆಲ್ಸ್) ಮಾತ್ರ ಸುತ್ತಲು ಸಾಧ್ಯವಿದೆ. ಬೀಜಕ್ಕೆ ಬಲು ಹತ್ತಿರವಾಗಿರುವ ಕವಚದ ಹೆಸರು ಏ ಕವಚ. ಅನಂತರದ್ದು ಅನುಕ್ರಮವಾಗಿ ಐ, ಒ, ಓ ಕವಚಗಳೆಂದು ಹೆಸರು. ಈ ಕವಚಗಳಲ್ಲಿ ಸುತ್ತುವ ಎಲೆಕ್ಟ್ರಾನುಗಳ ಶಕ್ತಿಮಟ್ಟವನ್ನು ಚಿತ್ರದಲ್ಲಿ ತೋರಿಸಿದೆ. ಎಕ್ಸ್‍ಕಿರಣಗಳನ್ನು ಉತ್ಪತ್ತಿಮಾಡುವ ಎಲೆಕ್ಟ್ರಾನುಗಳು ಗುರಿವಸ್ತುವಿನ ಪರಮಾಣುಗಳ ಏ-ಕವಚದ ಎಲೆಕ್ಟ್ರಾನುಗಳನ್ನು ಹೊರದೂಡುತ್ತವೆ ಎನ್ನೋಣ. ಆಗ ಆ ಎಲೆಕ್ಟ್ರಾನೊಂದರ ಸ್ಥಾನವನ್ನು ಐ-ಕವಚದಿಂದಾಗಲೀ ಒ-ಕವಚದಿಂದಾಗಲೀ ಒಂದು ಎಲೆಕ್ಟ್ರಾನು ಬಂದು ಆಕ್ರಮಿಸಬಹುದು. ಈ ಕ್ರಿಯೆಯಲ್ಲಿ ಅದು ಕಳೆದುಕೊಳ್ಳುವ ಶಕ್ತಿ ಎಕ್ಸ್‍ಕಿರಣದ ರೂಪದಲ್ಲಿ ಹೊರಹೊಮ್ಮುತ್ತದೆ. ಇಂಥ ಕಿರಣಗಳು ಏ ಪಂಕ್ತಿಗೆ ಸೇರಿದ ವಿಶಿಷ್ಟ ಎಕ್ಸ್‍ಕಿರಣಗಳು ಎನ್ನಿಸಿಕೊಳ್ಳುತ್ತವೆ. ಅಂತೆಯೇ ಐ-ಕವಚದಲ್ಲಿನ ಖಾಲಿ ಜಾಗಗಳನ್ನು ಒ, ಓ ಕವಚಗಳಿಂದ ಬಂದ ಎಲೆಕ್ಟ್ರಾನುಗಳು ಆಕ್ರಮಿಸಿ ಐ-ಪಂಕ್ತಿಗೆ ಸೇರಿದ ವೈಯಕ್ತಿಕ ಎಕ್ಸ್‍ಕಿರಣಗಳಿಗೆ ಕಾರಣವಾಗುತ್ತವೆ. 

ಚಿತ್ರ-7

ಮೇಸಿಕ್ ಎಕ್ಸ್‍ಕಿರಣಗಳು :	ಎಲೆಕ್ಟ್ರಾನಿಗಿಂತ ತೂಕವಾಗಿಯೂ ಪ್ರೋಟಾನಿಗಿಂತ ಹಗುರವಾಗಿಯೂ ಇರುವ ಅಸ್ಥಿರ ಮೂಲಕಣ ಮೇಸಾನ್ μ, π, Κ ಎಂಬ ಮೂರು ವಿಧದ ಮೇಸಾನುಗಳಿವೆ. ಪ್ರತಿ ವಿಧದಲ್ಲಿಯೂ ಧನ ಮತ್ತು ಋಣ ವಿದ್ಯುತ್ಕಣಗಳಿವೆ. ಇವನ್ನು ಆಧುನಿಕ ಕಣವೇಗವರ್ಧಕಗಳಲ್ಲೂ ಉತ್ಪತ್ತಿ ಮಾಡಬಹುದು. ಋಣ ಮೇಸಾನುಗಳನ್ನು ಒಂದು ವಸ್ತುವಿನಲ್ಲಿ ಹಾಯಿಸಿದರೆ ಅವು ಅಯಾನುತ್ಪತ್ತಿ ಮಾಡುತ್ತ (ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತ) ಮುಂದೆ ಸಾಗುತ್ತವೆ. ಮೇಸಾನಿನ ಶಕ್ತಿ ಬಹಳ ಕಡಿಮೆಯಾದಾಗ ವಸ್ತುವಿನ ಪರಮಾಣುವಿನ ಹೊರಕವಚದ ಎಲೆಕ್ಟ್ರಾನನ್ನು ಬದಲಿಸಿ ತಾನೇ ಬೀಜದ ಸುತ್ತಲೂ ಸುತ್ತತೊಡಗುತ್ತದೆ. ಇಂಥ ಪರಮಾಣುವಿನ ಹೆಸರು ಮೇಸಿಕ್ ಪರಮಾಣು. ಮೊದಲ ಹೊರ ಕವಚವನ್ನು ಆಕ್ರಮಿಸಿ ಮೇಸಾನು ಬರುಬರುತ್ತ ಒಳಗಣ ಕವಚಗಳ ಖಾಲಿಜಾಗಗಳನ್ನು ಆಕ್ರಮಿಸುತ್ತ ಹೋಗುತ್ತದೆ. 

ಚಿತ್ರ-8

ಹೀಗೆ ಪ್ರತಿಬಾರಿಯೂ ಅದು ಕವಚ ಸ್ಥಾನಪಲ್ಲಟ ಮಾಡುವಾಗ ಸ್ವಲ್ಪ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಇದು ಎಕ್ಸ್ ರೂಪದಲ್ಲಿ ಹೊರಬೀಳುತ್ತದೆ. ಇದನ್ನು ಮೇಸಿಕ್ ಎಕ್ಸ್‍ಕಿರಣವೆನ್ನುತ್ತಾರೆ. ಮೇಸಾನು ಎಲೆಕ್ಟ್ರಾನುಗಳಿಗಿಂತ ಸುಮಾರು 250ರಷ್ಟು ಹೆಚ್ಚು ತೂಕ ಇರುವುದರಿಂದ ಬೀಜದ ಸುತ್ತ ಅದರ ಕಕ್ಷಾ ತ್ರಿಜ್ಯ (ಯಾವುದೇ ಶಕಲ ಸಂಖ್ಯೆಗೆ ಸರಿಯಾಗಿ) ಎಲೆಕ್ಟ್ರಾನಿನದಕ್ಕಿಂತ ಸುಮಾರು 250ರಷ್ಟು ಕಡಿಮೆ ಇರುತ್ತದೆ. ಮೇಸಾನ್ ಪರಮಾಣುವಿನ ಟಿ ಕಕ್ಷೆಯಲ್ಲಿ ಸುತ್ತುತ್ತಿದೆ ಎನ್ನೋಣ. ಈಗ ಅದರ ಬೋರ್‍ತ್ರಿಜ್ಯವನ್ನು ಈ ರೀತಿ ಬರೆಯಬಹುದು :
		n2h2
         rn=
                    4 π2me2Z
   
ಇಲ್ಲಿ ಟಿ=ಕಕ್ಷೆಯ ಶಕಲ ಸಂಖ್ಯೆ; h=ಪ್ಲಾಂಕನ ನಿಯಂತಾಕ; m=ಮೆಸಾನಿನ ಕಡಿಮೆಯಾದ ದ್ರವ್ಯರಾಶಿ; e= ಎಲೆಕ್ಟ್ರಾನಿಕ್ ವಿದ್ಯುದಂಶ; z=ಪರಮಾಣುವಿನ ಪರಮಾಣು ಸಂಖ್ಯೆ.

	π - ಮೇಸಾನು (ತೂಕ 273 me) ತವರ (z=50, ಂ=120) ಪರಮಾಣುವಿನ ಮೊದಲ ಕಕ್ಷೆಯಲ್ಲಿ ಸುತ್ತುತ್ತಿದ್ದರೆ ಅದರ ಕಕ್ಷಾವ್ಯಾಸವನ್ನು ಮೇಲಿನ ಸಮೀಕರಣದ ಸಹಾಯದಿಂದ ಸುಮಾರು 7(10-13 ಸೆಂ.ಮೀ. ಎಂದು ಗುಣಿಸಬಹುದು. ಆದರೆ ತವರ ಬೀಜದ ವ್ಯಾಸ ಸುಮಾರು 5(10-13 ಸೆಂ.ಮೀ. ಅಂದರೆ ಬೀಜಕ್ಕೆ ಬಲು ಹತ್ತಿರವಾಗಿ ಮೇಸಾನ್ ಸುತ್ತುತ್ತಿದೆಯೆಂದಾಯಿತು. ಇನ್ನೂ ತೂಕದ ಪರಮಾಣುಗಳಲ್ಲಿ ಅದರ ಕಕ್ಷೆ ಬೀಜದೊಳಗೆ ಹಾದುಹೋಗುತ್ತದೆ. ಆದ್ದರಿಂದ ಮೇಸಿಕ್ ಎಕ್ಸ್‍ಕಿರಣಗಳ ಅಧ್ಯಯನ ಮೇಸಾನುಗಳ ಗುಣ ವಿಶೇಷಗಳನ್ನು ಹೊರಪಡಿಸುವುದೇ ಅಲ್ಲದೆ ಬೀಜದ ಗಾತ್ರ ಮತ್ತು ಅದರ ವಿದ್ಯುತ್ ಹಂಚಿಕೆಯನ್ನು ತಿಳಿಯಲು ಅನುಕೂಲವಾಗಿದೆ.
ವಸ್ತುಗಳಲ್ಲಿ ಹೀರಿಕೆ: (ಅಬ್‍ಸಾಪ್ರ್ಷನ್ ಇನ್ ಮ್ಯಾಟರ್) : Io ತೀವ್ರತೆ ಇರುವ ಸಮಾನಂತರ ಎಕ್ಸ್ ಕಿರಣಗಳನ್ನು x ಸೆಂ.ಮೀ. ದಪ್ಪದ ವಸ್ತುವಿನ ಮೂಲಕ ಹಾದು ಹೋಗುವಂತೆ ಮಾಡಿದಾಗ ಮೊದಲಿನ ದಿಕ್ಕಿನಲ್ಲಿ ಹೊರಬರುವ ಎಕ್ಸ್‍ಕಿರಣದ ತೀವ್ರತೆ I=I0e-μx ಇಲ್ಲಿ μ ರೇಖಾಹೀರಿಕೆಯ ಗುಣಾಂಕ (ಲೀನಿಯರ್ ಅಬ್‍ಸಾಪ್ರ್ಷನ್ ಕೋಎಫಿಶಿಯೆಂಟ್).

	ಎರಡು ವಿಧಾನಗಳಿಂದ ತೀವ್ರತೆ ಕಡಿಮೆಯಾಗುವುದು: 1. ಚದುರುವಿಕೆ (ಸ್ಕ್ಯಾಟರಿಂಗ್) 2. ಹೀರಿಕೆ ಕಾಂಪ್ಟನ್ ಪರಿಣಾಮದಿಂದ ವಸ್ತುವಿನಲ್ಲಿರುವ ಎಲೆಕ್ಟ್ರಾನುಗಳು ಎಕ್ಸ್‍ಕಿರಣಗಳನ್ನು ಚದುರಿಸುವುದರೊಡನೆ ಶಕ್ತಿ ಕುಂದಿಸುವುವು. ದ್ಯುತಿವಿದ್ಯುತ್ಪರಿಣಾಮದಿಂದ (ಫೋಟೋ ಎಲೆಕ್ಟ್ರಿಕ್ ಎಫೆಕ್ಟ್) ಎಕ್ಸ್‍ಕಿರಣಗಳ ಪ್ರೋಟಾನುಗಳು ಹೀರಲ್ಪಡುವುವು. ಈ ಕ್ರಿಯೆಯಲ್ಲಿ ನಿರ್ದಿಷ್ಟ ಶಕ್ತಿಯನ್ನು ಹೀರಿಕೊಂಡು ಏ, ಐ ಅಥವಾ ಒ ಕವಚಗಳಲ್ಲಿರುವ ಎಲೆಕ್ಟ್ರಾನುಗಳೇ ಸ್ಥಾನಪಲ್ಲಟಗೊಂಡು ಆ ಸ್ಥಾನವನ್ನು ಆಕ್ರಮಿಸಲು ಬರುವ ಬೇರೆ ಕವಚದ ಎಲೆಕ್ಟ್ರಾನುಗಳಿಂದ ಉತ್ಪತ್ತಿಯಾದ ಮತ್ತೊಂದು ರೀತಿಯ ಎಕ್ಸ್‍ಕಿರಣಗಳು ಹೊರಬರುವುವು. ಇದರ ಹೆಸರು ಪ್ರತಿದೀಪ್ತಿ (ಪ್ಲೂರಸೆನ್ಸ್). ಆದ್ದರಿಂದ ರೇಖಾಹೀರಿಕೆ ಗುಣಾಂಕ μ = σ + λ ಎಂದರೆ, μ =  ಚದರಿಕೆ ಗುಣಾಂಕ + ದ್ಯುತಿವಿದ್ಯುತ್ಪರಿಣಾಮ ಗುಣಾಂಕ. μ ವನ್ನು ಸಾಂದ್ರತೆಯಿಂದ ಭಾಗಿಸಿದರೆ ಜಡಾಂಶ ಹೀರಿಕೆ ಗುಣಾಂಕ ಬರುವುದು.

μ = σ + λ 
		p    p    p
		μm = σm + λm
μm ವಸ್ತುವಿನ ಸಾಂದ್ರತೆಯನ್ನು ಅನುಸರಿಸುವುದಿಲ್ಲ ಮತ್ತು ಭೌತ ಅಥವಾ ರಾಸಾಯನಿಕ ಸ್ಥಿತಿಯನ್ನೂ ಅವಲಂಬಿಸಿರುವುದಿಲ್ಲ. ಅಂದರೆ μ ಬೆಲೆ ವ್ಯತ್ಯಾಸಗೊಂಡರೂ ವಸ್ತುವಿನ ಘನ, ದ್ರವ ಅಥವಾ ಅನಿಲಸ್ಥಿತಿಗಳಲ್ಲಿ μm ಬೆಲೆ ಮಾತ್ರ ಒಂದೇ ಆಗಿರುತ್ತದೆ. ಯಾವುದಾದರೂ ವಸ್ತುವಿನಲ್ಲಿ μm ಬೆಲೆ ಎಕ್ಸ್‍ಕಿರಣ ಶಕ್ತಿಯನ್ನವಲಂಬಿಸಿರುವುದು. ಎಕ್ಸ್‍ಕಿರಣಶಕ್ತಿ ಹೆಚ್ಚುತ್ತ ಹೋದಂತೆ μm ಬೆಲೆ ಚಿತ್ರ 9ರಲ್ಲಿ ತೋರಿಸಿರುವಂತೆ ವ್ಯತ್ಯಾಸಗೊಳ್ಳುವುದು.

	ಕೆಲವು ನಿರ್ದಿಷ್ಟ ಶಕ್ತಿಗಳಲ್ಲಿ (ತರಂಗಾಂತರಗಳಲ್ಲಿ) μm ಬೆಲೆ ಶೀಘ್ರವಾಗಿ ಇಳಿಯುವುದು. ಈ ನಿರ್ದಿಷ್ಟ ಶಕ್ತಿಗಳಲ್ಲಿ ಎಕ್ಸ್‍ಕಿರಣಗಳು ವಸ್ತುವಿನ ಏ, ಐ ಅಥವಾ ಒ ಕವಚಗಳಲ್ಲಿನ ಎಲೆಕ್ಟ್ರಾನುಗಳನ್ನು ಸ್ಥಾನಪಲ್ಲಟಗೊಳಿಸುವುವು. μm ಬೆಲೆ ಎಕ್ಸ್‍ಕಿರಣ ಕೊಳವೆಯ ವಿದ್ಯುತ್ ವಿಭವಾಂತರ ಮತ್ತು ವಸ್ತುವಿನ ಪರಮಾಣು ಸಂಖ್ಯೆಗಳನ್ನು ಅವಲಂಬಿಸಿರುತ್ತದೆ.

ಉಪಯೋಗಗಳು : 1. ಎಕ್ಸ್‍ಕಿರಣಗಳ ಸಹಾಯದಿಂದ ಒಂದು ವಸ್ತುವಿನ ಪರಮಾಣು ರಚನೆಯನ್ನು ಗೊತ್ತುಮಾಡಬಹುದು. ಒಂದು ವಸ್ತುವನ್ನು ಉದ್ದೀಪ್ತಗೊಳಿಸಿ (ಎಕ್ಸೈಟ್) ಅದರಿಂದ ಬರುವ ಬೆಳಕನ್ನು ಅಶ್ರಗದ (ಪ್ರಿಸಂ) ಮೂಲಕ ಹಾಯಿಸಿದಾಗ ವಸ್ತುವಿನ ವೈಶಿಷ್ಟ್ಯ ರೋಹಿತವನ್ನೇ (ಕ್ಯಾರೆಕ್ಟೆರಿಸ್ಟಿಕ್ ಸ್ಪೆಕ್ಟ್ರಂ) ರೋಹಿತಮಾಪಕದ ಸಹಾಯದಿಂದ ಗ್ರಹಿಸಬಹುದು. 

ಚಿತ್ರ-9

ವಸ್ತುವಿನ ರೋಹಿತಕ್ಕೂ ಅದರ ಪರಮಾಣು ರಚನೆಗೂ ನಿಕಟಸಂಬಂಧವಿದೆ. ಬ್ರ್ಯಾಗ್ ಎಂಬ ವಿe್ಞÁನಿ ಎಕ್ಸ್‍ಕಿರಣಗಳು ಉತ್ಪತ್ತಿಯಾಗುವ ಕೊಳವೆಯಲ್ಲಿ ವಸ್ತುವನ್ನು ಗುರಿಯಾಗಿ ಅಳವಡಿಸಿ ಹೆಚ್ಚಿನ ವೇಗವುಳ್ಳ ಎಲೆಕ್ಟ್ರಾನುಗಳು ಅದರ ಮೇಲೆ ಬೀಳದಂತೆ ಮಾಡಿ ಅದರಿಂದ ಉತ್ಪತ್ತಿಯಾಗುವ ಎಕ್ಸ್‍ಕಿರಣಗಳನ್ನು ಸೂಕ್ತವಾದ ಸೀಳುಗುಂಡಿಯ ಮೂಲಕ ಹಾಯಿಸಿ ರೋಹಿತಮಾಪಕದ ಅಶ್ರಗದ ತಟ್ಟೆಯ ಮೇಲೆ ಇಟ್ಟು ಕಲ್ಲುಪ್ಪಿನ ಹರಳಿನ ಮೇಲೆ ಬೀಳುವಂತೆ ಮಾಡಿದ. 

ಚಿತ್ರ-10

ಹರಳಿನಿಂದ ಹೊರಬರುವ ಎಕ್ಸ್ ಕಿರಣಗಳನ್ನು ಅಯಾನೀಕರಣ ಮಂದಿರದ ಮೂಲಕ ಹಾಯಿಸಿ ಅದರ ಶಕ್ತಿಯನ್ನು ಅಳೆದ. ಹರಳನ್ನು ಅದರ ಸ್ಥಾನದಲ್ಲೇ ತಿರುಗಿಸುವ ಮೂಲಕ ಎಕ್ಸ್‍ಕಿರಣದ ನೇರಕ್ಕೂ ಹರಳಿಗೂ ಇರುವ ಓರಣದ ಕೋನವನ್ನು (ಗ್ಲ್ಯಾನ್ಸಿಂಗ್ ಆಂಗಲ್ಸ್) ವ್ಯತ್ಯಾಸ ಮಾಡುತ್ತ ಅದಕ್ಕನುಗುಣವಾಗಿ ಅಯಾನೀಕರಣ ಮಂದಿರವನ್ನು ತಿರುಗಿಸುತ್ತ ಬೇರೆ ಬೇರೆ ಓರಣದ ಕೋನವನ್ನು x-ಅಕ್ಷದ ಮೇಲೂ ಅಯಾನೀಕರಣದ ತೀವ್ರತೆಯನ್ನು (ಇಂಟೆನ್ಸಿಟಿ) ಥಿ-ಅಕ್ಷದ ಮೇಲೂ ಸೂಚಿಸಿದರೆ ಕೆಲವು ನಿರ್ದಿಷ್ಟ ಓರಣ ಕೋನಗಳಲ್ಲಿ ಮಾತ್ರ ಅಯಾನೀಕರಣ ವಿದ್ಯುತ್ ಪ್ರಮಾಣ ಪರಮಾವಧಿಯನ್ನು ಮುಟ್ಟುತ್ತದೆ. ಇದರಿಂದ ಹರಳಿನ ರಚನೆಯಲ್ಲಿ ಪರಮಾಣುಗಳು ನಿರ್ದಿಷ್ಟ ರೀತಿಯಲ್ಲಿ ಇರುತ್ತವೆ ಎಂಬುದು ಗೊತ್ತಾಗುವುದು. θ ಓರಣಕೋನವನ್ನೂ ಜ ಪರಮಾಣುಗಳು ಜೋಡಿಸಲ್ಪಟ್ಟಿರುವ ಪರಸ್ಪರ ಸಮಾನಾಂತರ ಸಮತಲಗಳ ನಡುವೆ ಇರುವ ಅಂತರವನ್ನೂ ಟಿ ನಮನವರ್ಗ (ಆರ್ಡರ್ ಆಫ್ ಡಿಫ್ರಾಕ್ಷನ್) ಮತ್ತು λ ಕಿರಣದ ತರಂಗಾಂತರವನ್ನೂ ಸೂಚಿಸಿದರೆ 2ಜ siಟಿ θ =ಟಿ λ ಎಂಬುದೇ ಬ್ರ್ಯಾಗ್ ನಿಯಮ. 

ಚಿತ್ರ-11

ಚಿತ್ರ 11ರಲ್ಲಿ ತೋರಿಸಿರುವಂತೆ ಂ1, ಂ2 ಮತ್ತು ಂ3 ಕ್ರಮವಾಗಿ θ1, θ2 ಮತ್ತು θ3 ಎಂಬ ನಿರ್ದಿಷ್ಟ ಓರಣ ಕೋನಗಳಲ್ಲಿ ಬರುವ ಪರಮಾವಧಿಗಳು. ಇವುಗಳ ಪಕ್ಕದಲ್ಲಿರುವ ಃ1, ಃ2 ಮತ್ತು ಃ3 ಎಂಬ ಪರಮಾವಧಿಗಳು ಮೂಲಕಿರಣದಲ್ಲಿರುವ ಇನ್ನಿತರ ತರಂಗಾಂತರಗಳಿಗೆ ಸಂಬಂಧಪಟ್ಟವು. ಂ1, ಃ1 ಮೊದಲನೆಯ ವರ್ಗಕ್ಕೂ ಂ2,ಃ2 ಎರಡನೆಯ ವರ್ಗಕ್ಕೂ ಂ3, ಃ3 ಮೂರನೆಯ ವರ್ಗಕ್ಕೂ ಸೇರಿದ ಪರಮಾವಧಿಗಳು. ಮೇಲಿನ ರೇಖಾಚಿತ್ರವನ್ನು ಪರಿಶೀಲಿಸಿದಾಗ ಈ ಕೆಳಗಿನ ಅಂಶಗಳು ವ್ಯಕ್ತವಾಗುತ್ತವೆ. ರೋಹಿತರೇಖೆಯ ವರ್ಗ ಹೆಚ್ಚಾದಂತೆಲ್ಲ ಪ್ರತಿಫಲನ ಕಿರಣಗಳ ತೀವ್ರತೆ ಕಡಿಮೆಯಾಗುತ್ತದೆ. ಪರಮಾವಧಿಗಳ ಸ್ಥಾನ ಎಕ್ಸ್‍ಕಿರಣ ಕೊಳವೆಯಲ್ಲಿ ಉಪಯೋಗಿಸುವ ಗುರಿಯ ವಸ್ತುವನ್ನು ಅವಲಂಬಿಸಿರುತ್ತದೆ. ಪ್ರತಿಫಲನ ಕಿರಣಗಳ ತೀವ್ರತೆ ಶೂನ್ಯವಾಗದೆ ಒಂದು ಕನಿಷ್ಠ ಪ್ರಮಾಣವನ್ನು ಹೊಂದಿದೆ. ಇದರಿಂದ ಸಂತತ ರೋಹಿತದ (ಕಂಟಿನ್ಯೂಯಸ್ ಸ್ಪೆಕ್ಟ್ರಂ) ಮೇಲೆ ಈ ವೈಶಿಷ್ಟ್ಯ ರೋಹಿತ ಉಂಟಾಗಿದೆ ಎಂಬುದು ವ್ಯಕ್ತವಾಗುತ್ತದೆ.

	ವಾನ್ ಲಾವೇ ಎಂಬ ಜರ್ಮನ್ ವಿe್ಞÁನಿ ಹರಳುಗಳನ್ನು ಉಪಯೋಗಿಸಿ ಎಕ್ಸ್ ಕಿರಣಗಳು ನಮನ (ಡಿಫ್ರಾಕ್ಷನ್)ಗೊಳ್ಳುತ್ತವೆ ಎಂಬುದನ್ನು ತೋರಿಸಿದ. ಎಕ್ಸ್‍ಕಿರಣಗಳ ತರಂಗಾಂತರ ಅತಿ ಕಡಿಮೆಯಾದುದರಿಂದ (10-8ಸೆಂ.ಮೀ.) ಬೆಳಕನ್ನು ನಮನಗೊಳ್ಳುವಂತೆ ಮಾಡಲು ಉಪಯೋಗಿಸುವ ನಮನ ರೇಖಾಫಲಕವನ್ನು (ಡಿಫ್ರಾಕ್ಷನ್ ಗ್ರೇಟಿಂಗ್) ಉಪಯೋಗಿಸಲು ಸಾಧ್ಯವಿಲ್ಲ. ಹರಳುಗಳಲ್ಲಿ ಪರಮಾಣುಗಳು ನಿರ್ದಿಷ್ಟ ರೀತಿಯಲ್ಲಿ ಇರುವುದರಿಂದಲೂ ಹರಳಿನ ಪರಸ್ಪರ ಎರಡು ಪರಮಾಣುಗಳ ನಡುವೆ ಇರುವ ಅಂತರ ಎಕ್ಸ್‍ಕಿರಣಗಳ ತರಂಗಾಂತರದಷ್ಟೇ ಇರುವುದರಿಂದಲೂ ಅವನ್ನು ನಮನಗೊಳ್ಳುವಂತೆ ಮಾಡಲು ಸಾಧ್ಯವಾಗುತ್ತದೆ. ಹರಳುಗಳನ್ನು ಮೂರು ಆಯಾಮಗಳ ವಕ್ರವಿಯೋಗ ರೇಖಾಫಲಕ (ತ್ರೀ ಡೈಮೆನ್ಷನಲ್ ಗ್ರೇಟಿಂಗ್) ಎನ್ನಬಹುದು. ಎಕ್ಸ್‍ಕಿರಣಗಳನ್ನು ಲಾವೇ ತೆಳುವಾದ ಹರಳುಗಳ ಮೂಲಕ ಹಾದು ಹೋಗುವಂತೆ ಮಾಡಿ ಅದರಿಂದ ಹಾದು ಬಂದ ಕಿರಣಗಳನ್ನು ಛಾಯಾಪಟಲದ ಮೇಲೆ ಬೀಳುವಂತೆ, ಮಾಡಿದ. ಛಾಯಾಪಟಲವನ್ನು ಸ್ಫುಟಗೊಳಿಸಿದಾಗ (ಡೆವಲಪ್ಡ್) ಪಟಿಲದ ಮಧ್ಯಭಾಗದಲ್ಲಿ ಒಂದು ಕಪ್ಪು ಚುಕ್ಕಿಯ ಸುತ್ತಲೂ ಅಷ್ಟು ಪ್ರಕಾಶವಿಲ್ಲದ ಅನೇಕ ಕಪ್ಪು ಚುಕ್ಕೆಗಳು ನಿರ್ದಿಷ್ಟ ಸ್ಥಾನದಲ್ಲಿ ಕಾಣಿಸಿಕೊಂಡವು. ಇವನ್ನು ಲಾವೇ ಚುಕ್ಕಿಗಳೆಂದು (ಲಾವೇ ಸ್ಪಾಟ್ಸ್) ಕರೆಯುವರು. 

ಚಿತ್ರ-12

	ವಿಲಿಯಂ ಬ್ರ್ಯಾಗ್ ಎಂಬಾತ ಈ ಚುಕ್ಕಿಗಳ ವಿಷಯವಾಗಿ ಸರಿಯಾದ ವಿವರಣೆ ಕೊಟ್ಟಿದ್ದಾನೆ. ಗೊತ್ತಾದ ಸಮತಲದಲ್ಲಿ ಅನುಕ್ರಮವಾಗಿ ಜೋಡಿಸಿರುವ ಪರಮಾಣುಗಳ ಮೇಲೆ ಎಕ್ಸ್‍ಕಿರಣಗಳು ಬಿದ್ದಾಗ ಈ ಪರಮಾಣುಗಳಿಂದ ಪ್ರತಿಫಲಿತ ಪರಸ್ಪರ ತರಂಗಗಳ ನಡುವೆ ಇರುವ ಪಥ ವ್ಯತ್ಯಾಸ (ಪಾತ್ ಡಿಫರೆನ್ಸ್) ಹಿಂದೆ ವಿವರಿಸಿದ 2ಜ siಟಿ θ =ಟಿ λ ಎಂಬ ಬ್ರ್ಯಾಗ್ ನಿಯಮಕ್ಕೆ ಅನುಗುಣವಾಗಿರಬೇಕು. ಮೂಲಕಿರಣದಲ್ಲಿ ವಿವಿಧ ತರಂಗಾಂತರವುಳ್ಳ ಕಿರಣಗಳಿರುವುದರಿಂದ ಬೇರೆ ಬೇರೆ ಸಮತಲಗಳಲ್ಲಿ ಜೋಡಿಸಿರುವ ಪರಮಾಣುಗಳಿಂದ ಒಂದೊಂದು ತರಂಗ ಪ್ರಮಾಣದ ಕಿರಣಗಳು ಬ್ರ್ಯಾಗ್ ನಿಯಮಕ್ಕೆ ಅನುಗುಣವಾದ ನೇರದಲ್ಲಿ ನಮನಗೊಳ್ಳುತ್ತವೆ. 

	ಮೋಸ್ಲಿ ಎಂಬ ವಿe್ಞÁನಿ 38 ಲೋಹಗಳನ್ನು ಎಕ್ಸ್‍ಕಿರಣ ಕೊಳವೆಯಲ್ಲಿ ಗುರಿಯನ್ನಾಗಿ ಉಪಯೋಗಿಸಿ ಅವುಗಳಿಂದ ಹೊರ ಸೂಸಿದ ರೋಹಿತಗಳನ್ನು ಪರೀಕ್ಷಿಸಿ ತನ್ನದೇ ಆದ ಒಂದು ನಿಯಮವನ್ನು ಪ್ರತಿಪಾದಿಸಿದ.  v ಎಕ್ಸ್‍ಕಿರಣದ ಆವರ್ತನ ಸಂಖ್ಯೆ(ಫ್ರೀಕ್ವೆನ್ಸಿ) Z ಲೋಹದ ಪರಮಾಣು ಸಂಖ್ಯೆ ಆಗಿದ್ದರೆ ಆಗ v=ಚಿ (Z-b)2 ಎಂಬುದೇ ಮೋಸ್ಲಿಯ ನಿಯಮ. ಚಿ ಮತ್ತು b ನಿಯಂತಾಕಗಳು. ಆವರ್ತನ ಸಂಖ್ಯೆಯ ವರ್ಗಮೂಲವನ್ನು (√v)ರೇಖಾಚಿತ್ರದ (ಚಿತ್ರ 13) ಥಿ-ಅಕ್ಷದ ಮೇಲೂ ಪರಮಾಣು ಸಂಖ್ಯೆಯನ್ನು (Z)x-ಅಕ್ಷದ ಮೇಲೂ ಸೂಚಿಸಿದರೆ ಸರಳರೇಖೆ ಬರುತ್ತದೆ. 

ಚಿತ್ರ-13

ಇದಕ್ಕೆ ಮೋಸ್ಲಿಯ ಚಿತ್ರ ಎನ್ನುವರು. ಧಾತುಗಳ ವರ್ಗೀಕರಣದಲ್ಲಿ (ಆವರ್ತಕೋಷ್ಟಕ, ಪೀರಿಯಾಡಿಕ್ ಕ್ಲ್ಯಾಸಿಫಿಕೇಷನ್ ಆಫ್ ಎಲಿಮೆಂಟ್ಸ್) ಪರಮಾಣು ಭಾರಕ್ಕಿಂತ ಪರಮಾಣು ಸಂಖ್ಯೆಯೇ ಮುಖ್ಯವಾದದ್ದು ಎಂಬ ಅಂಶ ವ್ಯಕ್ತವಾಗುತ್ತದೆ. ಇಂಥ ತಿಳಿವಳಿಕೆಯ ನೆರವಿನಿಂದ ಆವರ್ತ ಕೋಷ್ಟಕದಲ್ಲಿ ಕೆಲವು ಹೊಸ ಧಾತುಗಳ ಸ್ಥಾನಗಳನ್ನು ಗೊತ್ತುಪಡಿಸಲು ಸಾಧ್ಯವಾಯಿತು.

	ಎಕ್ಸ್‍ಕಿರಣಗಳಿಂದ ಕಲ್ಲುಪ್ಪು ಮತ್ತು ಪೆಟ್ಲುಪ್ಪಿನ ಒಳರಚನೆಯನ್ನು ಗೊತ್ತುಪಡಿಸಲಾಯಿತು. ಈ ಉಪ್ಪುಗಳು ಘನಾಕೃತಿ ತಳೆದಿವೆಯೆಂದೂ ಸೋಡಿಯಂ (ಅಥವಾ ಪೊಟ್ಯಾಸಿಯಂ) ಮತ್ತು ಕ್ಲೋರಿನ್ (ಅಯಾನುಗಳು) ಒಂದು ಘನ ಕಟ್ಟಡದಲ್ಲಿ ಕ್ರಮವಾಗಿ ಪರ್ಯಾಯಸ್ಥಾನವನ್ನು ಆಕ್ರಮಿಸಿದೆಯೆಂದೂ ತಿಳಿಯಲು ಸಾಧ್ಯವಾಯಿತು. ಘನರೂಪದಲ್ಲಿ ಸಹ ಸೋಡಿಯಂ ಘನ ವಿದ್ಯುತ್ ಕಣವಾಗಿಯೂ ಮತ್ತು ಕ್ಲೋರಿನ್ ಎಲೆಕ್ಟ್ರಾನ್ ಆಗಿಯೂ ಇದ್ದು ಇವುಗಳ ನಡುವೆ ಸ್ಥಾಯೀ ವಿದ್ಯುತ್ ಆಕರ್ಷಣ ಬಲ (ಎಲೆಕ್ಟ್ರೋಸ್ಟ್ಯಾಟಿಕ್ ಅಟ್ರ್ಯಾಕ್ಟಿವ್ ಫೋರ್ಸ್) ಇದ್ದು ಅವುಗಳ ಸಮಸ್ಥಿತಿಗೆ ಕಾರಣವಾಗುತ್ತವೆ ಎಂಬ ಅಂಶ ವ್ಯಕ್ತವಾಗುತ್ತದೆ.

	ಒಂದು ವಸ್ತುವಿನ ಮೂಲಕ ಎಕ್ಸ್‍ಕಿರಣಗಳನ್ನು ಹಾಯಿಸಿದಾಗ ಆ ವಸ್ತುವಿನಲ್ಲಿರುವ ಪ್ರತಿ ಧಾತುವೂ ಅದಕ್ಕೆ ಸಂಬಂಧಿಸಿದಂತೆ ವಿಶಿಷ್ಟ ಎಕ್ಸ್‍ಕಿರಣಗಳನ್ನು ಉತ್ಪತ್ತಿಮಾಡುತ್ತದೆ. ಆದ್ದರಿಂದ ವಸ್ತುವಿನಿಂದ ಹೊರಬಂದ ಎಕ್ಸ್‍ಕಿರಣಗಳನ್ನು ಒಂದು ಸ್ಪಟಿಕ ರೋಹಿತಮಾಪಕದಲ್ಲಿ (ಕ್ರಿಸ್ಟಲ್ ಸ್ಪೆಕ್ಟ್ರೊಮೀಟರ್) ಪರೀಕ್ಷಿಸಿದರೆ ಅವುಗಳ ತರಂಗಾಂತರ ಮತ್ತು ತೀಕ್ಷ್ಣತೆಗಳು ಗೊತ್ತಾಗುತ್ತವೆ. ಇವುಗಳಿಂದ ಆ ವಸ್ತುವಿನಲ್ಲಿನ ವಿವಿಧ ಧಾತುಗಳನ್ನೂ ಅವುಗಳ ಪ್ರಮಾಣವನ್ನೂ ತಿಳಿಯಬಹುದು. ಈ ವಿಧದಿಂದ ಹತ್ತು ಲಕ್ಷದಲ್ಲಿ ಒಂದು ಪಾಲಿನಷ್ಟು ಇರುವ ಧಾತುವನ್ನೂ ಸಹ ನಿರ್ಧರಿಸಲು ಸಾಧ್ಯವಿದೆ.

	ಏಕವರ್ಣೀಯ ಎಕ್ಸ್‍ಕಿರಣಗಳ (ಮಾನೊಕ್ರೊಮ್ಯಾಟಿಕ್) ನಿಮ್ನ ಕೋನ ಚದರಿಕೆಯ (ಲೋ ಆಂಗಲ್ ಸ್ಕ್ಯಾಟರಿಂಗ್) ಅಳತೆಗಳಿಂದ ವಸ್ತುವಿನಲ್ಲಿನ ತೂತುಗಳು, ವ್ಯತ್ಯಾಸಗಳು, ಸಂಧಿಗಳು ಮುಂತಾದವುಗಳ ಗಾತ್ರಗಳನ್ನು ಲೆಕ್ಕಹಾಕಬಹುದು.

	ವಿವಿಧ ಸಂಯೋಜನೆಯ ಅಥವಾ ವಿವಿಧ ಸಾಂದ್ರತೆಯುಳ್ಳ ಒಂದು ವಸ್ತುವಿನ ಮೂಲಕ ಎಕ್ಸ್‍ಕಿರಣಗಳನ್ನು ಹಾಯಿಸಿದಾಗ ಅವು ವ್ಯತ್ಯಸ್ತವಾಗಿ ಹೀರಲ್ಪಡುತ್ತವೆ. ಅಂದರೆ ಹೆಚ್ಚು ಸಾಂದ್ರತೆಯ ಭಾಗಗಳಲ್ಲಿ ಹೆಚ್ಚಾಗಿಯೂ ಕಡಿಮೆ ಸಾಂದ್ರತೆಯ ಭಾಗಗಳಲ್ಲಿ ಕಡಿಮೆಯಾಗಿಯೂ ಹೀರಲ್ಪಡುತ್ತವೆ. ಆದ್ದರಿಂದ ಹೊರಬಂದ ಎಕ್ಸ್‍ಕಿರಣಗಳನ್ನು ಛಾಯಾಪಟಲದ ಮೇಲೆ ಬೀಳಿಸಿದಾಗ ವಿವಿಧ ಭಾಗಗಳಲ್ಲುಂಟಾದ ಹೀರಿಕೆಯನ್ನು ಅನುಸರಿಸಿ ಎಕ್ಸ್‍ಕಿರಣ ಛಾಯಾಚಿತ್ರವುಂಟಾಗುವುದು. ಇಂಥ ಚಿತ್ರಗಳಲ್ಲಿ ಮಾಂಸ ಖಂಡಗಳಿಂದ ಮತ್ತು ತುಂಬುರಕ್ತದಿಂದ ಕೂಡಿದ ಹೃದಯ ಗಾಳಿಯಿಂದ ತುಂಬಿರುವ ಶ್ವಾಸಕೋಶಗಳಿಗಿಂತ ಭಿನ್ನವಾಗಿ ಕಾಣುವುದು. ಕ್ಯಾಲ್ಸಿಯಂ ಫಾಸ್‍ಫೇಟಿನಿಂದ ಕೂಡಿದ ಎಲುಬುಗಳು ಸುತ್ತಮುತ್ತಲಿನ ಮಾಂಸ ಖಂಡಗಳಿಗಿಂತ ಬೇರೆಯಾಗಿ ಕಾಣುವುವು. ಕ್ಯಾಲ್ಸಿಯಂ ಫಾಸ್‍ಪೇಟ್ ಹೆಚ್ಚು ಕಡಿಮೆ ಇದ್ದಷ್ಟೂ ಎಲುಬು ಹೆಚ್ಚು ಕಡಿಮೆಯಾಗಿ ಕಾಣವುದು. ಈ ಚಿತ್ರಗಳಿಂದ ವೈದ್ಯರು ರೋಗಗಳನ್ನು ಗುರುತಿಸಬಲ್ಲರು. ಅನ್ನನಾಳ, ಹೊಟ್ಟೆ ಮತ್ತು ಕರುಳುಗಳ ಭಾಗಗಳಲ್ಲಿನ ತೊಂದರೆ ಗುರುತಿಸಬೇಕಾದರೆ (ಅವು ಎಕ್ಸ್‍ಕಿರಣ ಛಾಯಾಚಿತ್ರದಲ್ಲಿ ಹಾಗೆಯೇ ಕಾಣಿಸುವುದಿಲ್ಲವಾದ್ದರಿಂದ) ಮೊದಲು ರೋಗಿಗೆ ಬೇರಿಯಂ ಸಲ್ಫೇಟನ್ನು ನೀರಿನಲ್ಲಿ ಕಲೆಸಿ ಕುಡಿಸುತ್ತಾರೆ. ಬೇರಿಯಂ ಸಲ್ಪೇಟ್ ಎಕ್ಸ್‍ಕಿರಣಗಳನ್ನು ಹೆಚ್ಚಾಗಿ ಹೀರುವುದರಿಂದ ಅದು ಹೋಗಿರುವ ಜಾಗಗಳು ಎಕ್ಸ್‍ಕಿರಣ ಛಾಯಾಚಿತ್ರದಲ್ಲಿ ಎದ್ದು ಕಾಣುತ್ತದೆ. ಎಕ್ಸ್‍ಕಿರಣ ಚಿತ್ರವನ್ನು ತೆಗೆಯುವ ಬದಲು ರೋಗಿಯನ್ನು ಎಕ್ಸ್‍ಕಿರಣಗಳು ಹೊರ ಹೊಮ್ಮುವ ಪಥದಲ್ಲಿ ನಿಲ್ಲಿಸಿ ಅವನ ಮುಂದೆ ಒಂದು ಸ್ಫುರಣ ಪರದೆಯನ್ನಿಟ್ಟರೆ ಅದರ ಮೇಲೆ ಎಕ್ಸ್‍ಕಿರಣ ಛಾಯೆ ಬೀಳುವುದು. ಈ ಛಾಯೆಯಲ್ಲಿ ರೋಗಿಯ ಕೆಲವು ಆಂತರಿಕ ಅವಯವಗಳ ಚಲನೆಯೂ ಕಾಣುತ್ತದೆ. ಉದಾಹರಣೆಗೆ, ಉಚ್ಫ್ವಾಸನಿಶ್ವಾಸಗಳಾಗುವ ಶ್ವಾಸಕೋಶಗಳಲ್ಲಿ ಉಂಟಾಗುವ ವ್ಯತ್ಯಾಸ ಕಾಣುತ್ತದೆ. ಈ ವಿಧಾನಕ್ಕೆ ಎಕ್ಸ್‍ಕಿರಣಗಳ ಸಹಾಯದಿಂದ ತೆಗೆಯುವ ಪರದೆ ಮೇಲಿನ ಚಿತ್ರ (ಸ್ಕ್ರೀನಿಂಗ್) ಎಂದು ಹೆಸರು. ಇದರಲ್ಲಿ ಒಂದು ತೊಂದರೆ ಎಂದರೆ ರೋಗಿಗಳನ್ನು ಪರೀಕ್ಷಿಸುವ ವೈದ್ಯರು ಸದಾ ಎಕ್ಸ್‍ಕಿರಣಗಳಿಗೆ ಗುರಿಯಾಗಿರುವುದರಿಂದ ಅವುಗಳ ದುಷ್ಪರಿಣಾಮ ಅವರ ಮೇಲೂ ಉಂಟಾಗುತ್ತದೆ. ಎಕ್ಸ್‍ಕಿರಣಗಳು ಅವುಗಳ ಶಕ್ತಿಯನ್ನನುಸರಿಸಿ ಜೀವಿಗಳಲ್ಲಿ ವಿವಿಧ ದುಷ್ಪರಿಣಾಮವನ್ನುಂಟುಮಾಡುತ್ತವೆ. ಬಿಳಿಯರಕ್ತಕಣಗಳು ಕಡಿಮೆಯಾಗುವಿಕೆ, ಕೂದಲು ಉದುರುವಿಕೆ, ಚರ್ಮವ್ಯಾಧಿಗಳು, ನಿರ್ವೀರ್ಯತೆ ಮುಂತಾದುವು ಕಾಣಿಸಿಕೊಳ್ಳಬಹುದು. ಕೆಲವು ಪ್ರಾಣಿಗಳ ಜೀನುಗಳಲ್ಲಿ ಎಕ್ಸ್‍ಕಿರಣಗಳು ವಿಕೃತಿಗಳನ್ನು (ಮ್ಯುಟೇಶನ್ಸ್) ಉಂಟುಮಾಡುತ್ತವೆ. ಇದರಿಂದಾಗಿ ಅವುಗಳ ಸಂತಾನ ವಿಕಾರ ಸ್ವರೂಪಗಳನ್ನು ಹೊಂದುತ್ತವೆ. ಆದರೂ ಇಂಥ ವಿಕೃತಿಗಳನ್ನು ಕೆಲವು ಬೆಳೆಗಳಲ್ಲಿ ಉಂಟುಮಾಡಿ ಹೊಸ ತಳಿಗಳನ್ನೇ ಮಾಡಬಹುದು. ಕ್ಯಾನ್ಸರ್ ರೋಗವನ್ನು ತಡೆಗಟ್ಟಲು ಮತ್ತು ಕೆಲವು ಸಂದರ್ಭಗಳಲ್ಲಿ ಅದನ್ನು ಗುಣಪಡಿಸಲು ಎಕ್ಸ್‍ಕಿರಣಗಳು ಫಲಕಾರಿಯಾಗಿವೆ.

	ವಸ್ತುಗಳನ್ನು ಬೆಸುಗೆ (ವೆಲ್ಡ್) ಮಾಡಿದಾಗ ಅದು ಸರಿಯಾಗಿ ಆಗಿದೆಯೆ ಇಲ್ಲವೇ ಎನ್ನುವುದು ಅದರ ಎಕ್ಸ್‍ಕಿರಣ ಛಾಯಾಚಿತ್ರದಿಂದ ಸ್ಪಷ್ಟವಾಗುವುದು. ಅಂತೆಯೇ ಎರಕ ಹೊಯ್ದ ವಸ್ತುಗಳಲ್ಲಿ ಮಧ್ಯೆ ಮಧ್ಯೆ ಗಾಳಿ ಸೇರಿಕೊಂಡಿದೆಯೇ ಇಲ್ಲವೇ ಎಂಬುದು ಕೂಡ ಎಕ್ಸ್‍ಕಿರಣ ಛಾಯಾಚಿತ್ರಗಳಲ್ಲಿ ಸ್ಪಷ್ಟವಾಗುತ್ತದೆ. ಪ್ರಾಚೀನ ಕಲಾವಸ್ತುಗಳ ಎಕ್ಸ್‍ಕಿರಣ ಚಿತ್ರಗಳಿಂದ ಅವುಗಳ ನೈಜತೆಯನ್ನು ನಿರ್ಧರಿಸಬಹುದು; ಮಾತ್ರವಲ್ಲ ಪುನಃಸ್ಪರ್ಶನವೇನಾದರೂ ನಡೆದಿದ್ದರೆ ಅದನ್ನು ಗುರುತಿಸಬಹುದು.

	ಎಕ್ಸ್‍ಕಿರಣಗಳು ಕೆಲವು ರಾಸಾಯನಿಕ ಕ್ರಿಯೆಗಳನ್ನುಂಟುಮಾಡಬಲ್ಲವು. ಇಂಥ ಕ್ರಿಯೆಗಳಿಂದ ಅನೇಕ ಸಾವಯವ ಸಂಯುಕ್ತ ವಸ್ತುಗಳನ್ನು ರಚಿಸಲಾಗಿದೆ.

	ಎಕ್ಸ್‍ಕಿರಣಗಳು ಘನಸ್ಥಿತಿ ಭೌತಶಾಸ್ತ್ರದ (ಸಾಲಿಡ್‍ಸ್ಟೇಟ್ ಫಿಸಿóಕ್ಸ್) ಹಲವಾರು ಉಪಕರಣಗಳ ಬೆಳೆವಣಿಗೆಗೆ ಬಹಳ ಸಹಕಾರಿಯಾಗಿವೆ.					 		
(ಬಿ.ಆರ್.ಜಿ.; ಪಿ.ವಿ.; ಕೆ.ಜಿ.)

ಎಕ್ಸ್‍ಕಿರಣಜನಿತ ಚರ್ಮರೋಗ: (ರೋಡಿಯೋ ಡೆರ್ಮಟೈಟಿಸ್): ವಿಸರಣೆಯಾಗಲೀ (ರೇಡಿಯೇಶನ್) ಎಕ್ಸ್ ಕಿರಣಗಳಾಗಲೀ ಮಿತಿಮೀರಿ ಚರ್ಮಕ್ಕೆ ತಗುಲಿದರೆ ಸ್ವಲ್ಪ ಕಾಲಾನಂತರ ಚರ್ಮದ ಮೇಲೆ ಪ್ರತಿಕೂಲ ಪರಿಣಾಮಗಳು ಕಂಡುಬರುತ್ತವೆ. ಮೊದಲ ವಿಸ್ತರಣೆ ತಗುಲಲು ಆರಂಭವಾದಂದಿನಿಂದ ಪರಿಣಾಮ ತೋರಿಸಿರುವವರೆಗಿನ ಅವಧಿಯ ಹೆಸರು ಅವ್ಯಕ್ತಕಾಲಾವಧಿ (ಇನ್ಕುಬೇಶನ್ ಪೀರಿಯಡ್).

	ಚರ್ಮಕ್ಕೆ ತಗುಲಿದ ವಿಸರಣೆಯ ಪ್ರಮಾಣಾನ್ವಯ ನಾಲ್ಕು ಮಟ್ಟಗಳಲ್ಲಿ ಚರ್ಮದ ಉರಿತವನ್ನು ವಿವರಿಸಬಹುದು. 

	1. ವಿಸರಣೆ ತಗುಲಿದ ಜಾಗದಲ್ಲಿ ನವೆ ಮತ್ತು ಉರಿಯಾಗಿ ಕೆಂಪೇರಿ ಎರಡು ವಾರಗಳ ಅನಂತರ ಚರ್ಮ ಸುಲಿಯುತ್ತದೆ. ಕೂದಲಿರುವ ಚರ್ಮವಾಗಿದ್ದರೆ ತಾತ್ಕಾಲಿಕವಾಗಿ ಕೂದಲು ಉದುರಿ ಹೋಗುವುದು. ಅಲ್ಪ ಪ್ರಮಾಣದಿಂದಾಗುವ ಈ ಪರಿಣಾಮದಿಂದ ಯಾವ ಶಾಶ್ವತ ಹಾನಿಯೂ ಆಗುವುದಿಲ್ಲ.

	2. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಿಸರಣೆ ತಗುಲಿದರೆ ಒಂದು ವಾರದ ಅನಂತರ ಚರ್ಮ ಕೆಂಪಾಗಿ ಊದುವುದು. ಹೀಗೆ ಮೂರು ನಾಲ್ಕು ವಾರಗಳಿರಬಹುದು. ಕೆಲವು ಕಾಲದ ಅನಂತರ ಚರ್ಮದಲ್ಲಿರುವ ಲೋಮರಕ್ತನಾಳಗಳು ಉಬ್ಬಿ ಗಂಟಿಕ್ಕಿದಂತಾಗುವುವು. ಚರ್ಮದ ಬಣ್ಣವೇರಿ ಹುರುಪೇಳುವುದು. ವಿಸರಣೆ ತಗಲಿದೆಡೆಗಳಲ್ಲಿ ಚರ್ಮ ಒಣಗಿ ಸೊರಗುತ್ತದೆ. ಈ ಬದಲಾವಣೆಗಳು ಶಾಶ್ವತ.

	3. ಇದು ಮಿತಿ ಮೀರಿದ ಪ್ರಮಾಣದಲ್ಲಿ ವಿಸರಣೆ ತಗುಲಿದಾಗಿನ ಮಾರು ವರ್ತನೆ. ಸಣ್ಣ ಮತ್ತು ದೊಡ್ಡ ನೀರ್ಗುಳ್ಳೆಗಳಿರುವ ಉಗ್ರವಾದ ಈ ಪ್ರತಿಕ್ರಿಯೆ ತಾಕಿದೆಡೆಗಳಲ್ಲಿ ಸ್ಪಷ್ಟ ಬದಲಾವಣೆಗಳಿಂದ ಕೊನೆಗೊಳ್ಳುತ್ತದೆ.

	4. ಸುಮಾರು 5-6 ವರ್ಷಗಳ ಅವ್ಯಕ್ತಕಾಲಾವಧಿಯ ಅನಂತರ ರಕ್ತನಾಳಗಳಲ್ಲಿ ಶಾಶ್ವತ ಬದಲಾವಣೆಗಳಾಗಿ ಅದರಿಂದ ತೀವ್ರವಾಗಿ ಊತಗಳ ಪೋಷಣೆ ಕುಗ್ಗಿ ಈ ಪರಿಣಾಮವಾಗಿ ಆಳದಲ್ಲಿ ನೋಯುವ ವಾಸಿಯಾಗದ ಗೊತ್ತಾದ ಅಂಚುಳ್ಳ, ಕಂದು ಇಲ್ಲವೇ ಹಳದಿ ಹಕ್ಕು ಕಟ್ಟಿದ ಗಾಯವಾಗುವುದು. ಚರ್ಮದ ಎಲ್ಲ ಪದರಗಳಲ್ಲೂ ಚರ್ಮದಡಿಯಲ್ಲಿರುವ ಅಂಗಾಂಶದಲ್ಲೂ ಈ ಉರಿತವಿರುತ್ತದೆ. ಉರಿತದ ಎಡೆಗಳಲ್ಲಿ ಕೊಂಚರ್ಮವಾಗಿ (ಕೆರಟೆಲಾಸಿಸ್) ಮಂದಗಟ್ಟಿರುವುದು ಮುಂದೆ ಕ್ಯಾನ್ಸರಾಗಿ ಪರಿವರ್ತಿಸಬಹುದು. ಪೆಟ್ಟಾಗಿರುವ ಚರ್ಮ ಬಿರಿದುಕೊಂಡು ವಾಸಿಯಾಗದ ಗಾಯಗಳು ಕಾಣಿಸಿಕೊಳ್ಳುತ್ತವೆ.

	ಬೇರೂರಿದ ವಿಸರಣ ಚರ್ಮದುರಿತ : ಸಾಮಾನ್ಯವಾಗಿ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಪದೇ ಪದೇ ವರ್ಷಾಂತರಗಳು ವಿಸರಣೆ ಚರ್ಮದ ಮೇಲೆ ಬೀಳುತ್ತಿದ್ದರೆ ಅಂಥ ಚರ್ಮದಲ್ಲಿ ಈ ರೀತಿಯ ಮರುವರ್ತನೆ ಕಾಣುವುದು. ಇದು ಕೆಲವರಲ್ಲಿ ಅತಿಯಾಗಿರಬಹುದು. ಸಾಕಷ್ಟು ಎಚ್ಚರವಹಿಸಿದ ವೈದ್ಯರೂ ವಿಸರಣತಜ್ಞರು ಹಲವೇಳೆ ಇದಕ್ಕೆ ಬಲಿಯಾಗುವರು. ಅನೇಕರಲ್ಲಿ ಕೈ ಮತ್ತು ಕೈ ಬೆರಳುಗಳಲ್ಲೂ ಇದು ಕಾಣುವುದು. ಮೊದಲ ಚಿಹ್ನೆಗಳು ಚಳಿಗೊಡ್ಡಿದ ಚರ್ಮದಲ್ಲಿ ಉರಿ ಮತ್ತು ನವೆ, ಒಣಕಲು ಚರ್ಮ, ಕೂದಲು ಉದುರುವುದು, ಚರ್ಮ, ಕೀಲುಗಳ ಮೇಲೂ ಚರ್ಮದ ಮಡಿಕೆಗಳಲ್ಲೂ ಒಡೆಸೀಳಿ ಆಗುವ ಬಿರಿಕೆಗಳು (ಫಿಶ್ಕದ್), ಚರ್ಮ ಸುಕ್ಕಲಾಗಿ ತೆಳುವಾಗುವುದು. ಒಣಕಲ ಚುಕ್ಕೆಗಳೂ ಬಣ್ಣದ ಚುಕ್ಕೆಗಳೂ ಹಿಗ್ಗಿದ ರಕ್ತನಾಳಗಳೂ ಕಾಣುವುವು. ಇವುಗಳೊಂದಿಗೆ ಉಗುರುಗಳೂ ಬಣ್ಣಗೆಟ್ಟು ಚೂರಾಗುತ್ತವೆ. ಚರ್ಮ ಅಲ್ಲಲ್ಲಿ ಕೊಂಚರ್ಮವಾಗಿ ಮಂದಗಟ್ಟಿರುವುದು ಮುಂದೆ ಕ್ಯಾನ್ಸರಾಗಿ ಪರಿವರ್ತಿಸಬಹುದಾದ್ದರಿಂದ ಅಂಥ ಚರ್ಮವನ್ನು ಜೇವುಂಡಿಗೆ (ಬಯೋಪ್ಸಿ) ಹಾಕಿ ಪರೀಕ್ಷಿಸಬೇಕು.

	ರೋಗಚಿಕಿತ್ಸೆ: ಕೂರಾದ ಚರ್ಮದುರಿತವನ್ನು ತೇವವಿರುವ ಬಟ್ಟೆಗಳಿಂದ ತೋಯಿಸಿ ಜಿಡ್ಡು ಪದಾರ್ಥಗಳನ್ನು ಹ್ಚುವುದರಿಂದ ಮೆತುಗೊಳಿಸುವ ಲೇಪನಗಳಿಂದ ಮೊದಮೊದಲಲ್ಲಿ ಉರಿ ನವೆಗಳನ್ನು ತಗ್ಗಿಸಬಹುದು. ಬೇರೂರಿದ ಉರಿತದಿಂದ ಚರ್ಮ ಗಾಯಗೊಳ್ಳದಿದ್ದರೆ ಈ ಮೆತು ಲೇಪನಗಳಿಂದಲೇ ಸರಿಹೋಗಬಹುದು. ಹಾಗಿಲ್ಲದೇ ವರ್ಷ ಕಳೆದರೂ ಸರಿಹೋಗದೇ ಇದ್ದರೆ ಅಂಥ ಚರ್ಮವನ್ನು ತೆಗೆದು ರೋಗಿಯ ಬೇರೆ ಭಾಗದಿಂದ ಆರೋಗ್ಯವಾದ ಚರ್ಮವನ್ನು ಶಸ್ತ್ರಚಿಕಿತ್ಸೆಯ ಮೂಲಕ ನಾಟಿ ಹಾಕಬೇಕು. ಕೊಂಚರ್ಮದಿಂದ ಮಂದವಾದ ಕೂಡಲೆ ವಿದ್ಯುತ್ ಸುಡಿಗೆಯಿಂದ ತೆಗೆದು ಹಾಕಬೇಕು. ಸಣ್ಣ ಸಣ್ಣ ಗಾಯಗಳು ವಾಸಿಯಾಗಬಹುದು. ಇವು ಬಹಳ ನೋಯುತ್ತವೆ. ಲೋಳೆಸರದ ತಿರುಳನ್ನು ಗಾಯಗಳಿಗೆ ಹಾಕಿ ಕಟ್ಟುವುದರಿಂದ ನೋವು ಇಳಿದು ಬೇಗ ವಾಸಿಯಾಗುವುದು. ದೊಡ್ಡ ಗಾಯಗಳು ಸಾಮಾನ್ಯ ಚಿಕಿತ್ಸೆಗೆ ಜಗ್ಗದಲ್ಲಿ ಅವನ್ನು ಶಸ್ತ್ರ ಚಿಕಿತ್ಸೆಯಿಂದ ತೆಗೆದು ಹಾಕಿ ಬೇರೆ ಚರ್ಮ ನಾಟಿ ಹಾಕಬೇಕು.

	ರೋಗ ನಿಧಾನಕ್ಕೆ ಮತ್ತು ಚಿಕಿತ್ಸೆಗೆ ವಿಸರಣೆಯನ್ನು ಎಕ್ಸ್ ಕಿರಣಗಳನ್ನೂ ಬಳಸುತ್ತೇವೆ. ಕೆಲವು ವೇಳೆ ಇವು ಬೇಡದ ಮಾರುವರ್ತನೆಗಳಾಗಿಸುತ್ತವೆ. ಇದರಲ್ಲಿ ತಾತ್ಕಾಲಿಕವಾದರೂ ಮತ್ತೆ ಕೆಲವು ಸ್ಥಿರವಾಗಿ ನಿಲ್ಲಬಹುದು. ಕೆಲವು ವೇಳೆ ಇವೇ ವಿಷಮವಾಗಿ ಪ್ರಾಣಕ್ಕೇ ಅಪಾಯವಾಗಬಹುದು. 		 		
(ಡಿ.ಪಿ.ಜೆ.)

ಎಕ್ಸ್‍ಕಿರಣ ಹರಳುಶಾಸ್ತ್ರ :	ಎಕ್ಸ್‍ಕಿರಣನಮನ ವಿಧಾನಗಳಿಂದ ಹರಳುಗಳ ರಚನೆಯ ಅಭ್ಯಾಸ (ಎಕ್ಸ್‍ರೇ ಕ್ರಿಸ್ಟಲ್ಲೋಗ್ರಫಿ). ಒಂದು ಹರಳಿನ ರಚನೆ ಹೀಗಿದೆ; ಪರಮಾಣುಗಳ ಅಥವಾ ಪರಮಾಣು ಸಮುದಾಯಗಳ ಅಥವಾ ಅಣುಗಳ ಜಾಲ; ಇದು ಮೂರು ಆಯಾಮಗಳಲ್ಲಿರುವ ಒಂದು ಏರ್ಪಾಡು. ಜಾಲ ಪುನರಾವರ್ತಿಸುವಂತೆ ರಚನೆ ಉಂಟು. ಪ್ರತಿಯೊಂದು ಹರಳಿನ ಜಾಲದಲ್ಲಿ ಬೇರೆ ಬೇರೆಯಾದ ಕೋಶಪರಿಮಾಣಗಳಿವೆ. ಅಲ್ಲದೇ ಆಯಾ ಹರಳಿಗೆ ವಿಶಿಷ್ಟವಾದ ಸಮಾಂಗತೆ (ಸಿಮೆಟ್ರಿ) ಸಹ ಇದೆ. ಜಾಲದಲ್ಲಿ ಬೇರೆ ಬೇರೆ ಪರಮಾಣುಗಳು ನಿರ್ದಿಷ್ಟ ಜಾಗಗಳಲ್ಲಿ ನೆಲೆಸಿರುತ್ತವೆ. ಪರಮಾಣುಗಳ ಸ್ಥಾನ, ಹರಳಿನ ನಾನಾಮಟ್ಟದ ಸಮಾಂಗತೆ ಮತ್ತು ಕೋಶಪರಿಮಾಣಗಳನ್ನು ನಿರ್ಧರಿಸುವಿಕೆಯೇ ಹರಳುಶಾಸ್ತ್ರ.
	ಎಕ್ಸ್‍ಕಿರಣಗಳ ತರಂಗಾಂತರ ಮತ್ತು ಹರಳಿನಲ್ಲಿ ಪರಮಾಣುಗಳ ನಡುವಿನ ಅಂತರ ಸುಮಾರು ಒಂದೇ ಪ್ರಮಾಣದಲ್ಲಿರುತ್ತವೆ. ಇದನ್ನು ಗಮನಿಸಿ ವಾನ್‍ಲಾವೇ ಹರಳುಗಳ ಮೂಲಕ ಎಕ್ಸ್‍ಕಿರಣಗಳನ್ನು ಹಾಯಿಸಿದಾಗ ನಮನ ರೇಖಾಫಲಕದಲ್ಲಿನ (ಡಿಫ್ರಾಕ್ಷನ್ ಗ್ರೇಟಿಂಗ್) ದ್ಯುತಿನಮನದಂತೆ ನಮನಪರಿಣಾಮ ಹೊಂದುತ್ತವೆಂದು ಸೂಚಿಸಿದ (1912). 
ಎಕ್ಸ್‍ಕಿರಣಗಳನ್ನು ಹಾಯಿಸಿದಾಗ ಹರಳಿನಿಂದ ಹೊರಬರುವ ಪ್ರಥಮವರ್ಗದ ಎಕ್ಸ್‍ಕಿರಣದಷ್ಟೇ ಅಲ್ಲದೆ ನಮನಗೊಂಡ ಬೇರೆ ಬೇರೆ ಕಿರಣಗಳು ನಿರ್ದಿಷ್ಟಕೋನಗಳಲ್ಲಿ ಹೊರಬರುತ್ತವೆ.

ಚಿತ್ರ-15

	ಹರಳು ಮೂರು ಆಯಾಮಗಳ ನಮನ ರೇಖಾಫಲಕದಂತೆ (ತ್ರೀ ಡೈಮೆನ್ಷನಲ್ ಡಿಫ್ರಾಕ್ಷನ್ ಗ್ರೇಟಿಂಗ್) ವರ್ತಿಸುವುದರಿಂದ ಈ ನಮನವುಂಟಾಗುತ್ತದೆಂದು ಲಾವೇ ಸೂಚಿಸಿದ. ಎಕ್ಸ್‍ಕಿರಣ ಹರಳಿನ ಮೂಲಕ ಹಾಯ್ದಾಗ ಆಕಾಶ ಜಾಲದ ಬಿಂದುಗಳಲ್ಲಿ (ಸ್ಪೇಸ್ ಲ್ಯಾಟ್ಟಿಸ್ ಪಾಯಿಂಟ್ಸ್) ಹರಡಿರುವ ಪರಮಾಣು ಗುಂಪುಗಳಲ್ಲಿನ ಪ್ರತಿಯೊಂದು ಪರಮಾಣು ವಿಕಿರಣದ ಸ್ವಲ್ಪಭಾಗವನ್ನು ಚದರಿಸುತ್ತದೆ. ಅದರಿಂದ ಹರಳಿನ ಪ್ರತಿಯೊಂದು ಜಾಲಕಬಿಂದು ಚದುರಿದ ತರಂಗಕಗಳ (ವೇವ್‍ಲೆಟ್ಸ್) ಕೇಂದ್ರವಾಗುತ್ತದೆ. ಹರಳುಜಾಲದಲ್ಲಿರುವ ಕ್ರಮಬದ್ಧ ಅಂತರದಿಂದ (ಸ್ಪೇಸಿಂಗ್) ಈ ಕೇಂದ್ರಗಳ ಮಧ್ಯೆ ನಿರ್ದಿಷ್ಟವಾದ ದಶೆ (ಫೇಸ್) ಸಂಬಂಧಗಳಿರುತ್ತವೆ. ಈ ಮೇಲಿನ ವಿಚಾರವನ್ನಾಧರಿಸಿ ಲಾವೇ ನಮನಕಿರಣವುಂಟಾಗಲು ಪಾಲಿಸಬೇಕಾದ ನಿಯಮಗಳನ್ನು ಕೊಟ್ಟಿರುತ್ತಾನೆ.
		ಚಿ (ಛಿos α —ಛಿos i1) = ಟಿ1λ
		b (ಛಿos β —ಛಿos i2) =ಟಿ2 λ
		ಛಿ (ಛಿos  γ—ಛಿos i3) =ಟಿ3 λ					                         . . .(1)

ಇವೇ ಲಾವೇ ಸಮೀಕರಣಗಳು. ಚಿ, b, ಛಿ ಗಳು ಹರಳಿನ ಮೂರು ಪ್ರಧಾನ ಅಕ್ಷಗಳಲ್ಲಿನ ಜಾಲಾಂತರಗಳು (ಲ್ಯಾಟ್ಟಿಸ್ ಸ್ಪೇಸಿಂಗ್). i1, i2,  i3 ಗಳು ಪತನ ತರಂಗ ಲಂಬರೇಖೆ ಚಿ, b, ಛಿ ಅಕ್ಷಗಳೊಡನೆ ಮಾಡುವ ಕೋನಗಳು. α, β, γ ಗಳು ನಮನ ತರಂಗಮುಖದ ಲಂಬರೇಖೆ ಚಿ, b, ಛಿ ಅಕ್ಷಗಳೊಡನೆ ಮಾಡುವ ಕೋನಗಳು. 

ಚಿತ್ರ-16

	ಈ ನಮನವನ್ನು ಡಬ್ಲ್ಯು.ಎಲ್.ಬ್ರ್ಯಾಗ್ ಬೇರೊಂದು ರೀತಿ ವಿವರಿಸುತ್ತಾನೆ. ಆಕಾಶಜಾಲದ ಬಿಂದುಗಳು ಒಂದೇ ರೀತಿಯ ಸಮಾಂತರವುಳ್ಳ ಸಮಾನಾಂತರ ಸಮತಲದಲ್ಲಿ ಹರಡಿರುವಂತೆ ಗಣಿಸಬಹುದು. ಸಮಾನಾಂತರ ಎಕ್ಸ್‍ಕಿರಣಗಳು ಸಮತಲಕ್ಕೆ ಒಂದು ಓರೆಕೋನದಲ್ಲಿ ಪತನವಾದಾಗ ಪ್ರತಿಯೊಂದು ಸಮತಲ ಪತನ ಕಿರಣದ ಸ್ವಲ್ಪ ಭಾಗವನ್ನು ಪ್ರತಿಫಲಿಸುತ್ತದೆ. ಹೈಗನ್ನನ ಸಮತಲಪ್ರತಿಫಲನ ನಿಯಮದಂತೆ ಸಮತಲದಲ್ಲಿನ ಕೇಂದ್ರಗಳಲ್ಲಿ ಚದರಿದ ತರಂಗಕಗಳು ಸೇರುತ್ತವೆ. ಒಂದು ನಮನಕಿರಣ ಉಂಟಾಗುವುದಾದರೆ ಅದು ಹರಳಿನ ಸಮತಲದಿಂದುಟಾಗುವ ಪ್ರತಿಫಲನ ದಿಕ್ಕಿನಲ್ಲಾಗುತ್ತದೆ. ಪ್ರತಿಯೊಂದು ಸಮತಲದಿಂದ ಪ್ರತಿಫಲಿಸಲ್ಪಟ್ಟ ತರಂಗಗಳು ಒಂದೇ ದಶೆಯಲ್ಲಿದ್ದರೆ ಮಾತ್ರ ನಮನವಾಗುತ್ತದೆ; ಇಲ್ಲದಿದ್ದರೆ ವಿನಾಶೀವ್ಯತಿಕರಣವಾಗುತ್ತದೆ (ಡಿಸ್ಟ್ರಕ್ಟಿವ್ ಇಂಟರ್‍ಫಿಯರೆನ್ಸ್). ಒಂದು ಕಿರಣ ಪತನವಾದಾಗ ಬೇರೆ ಬೇರೆ ಸಮತಲಗಳಿಂದ ಪ್ರತಿಫಲಿಸಲ್ಪಟ್ಟ ಕಿರಣಗಳ ಮಧ್ಯೆ ಇರುವ ಪಥವ್ಯತ್ಯಾಸ 2ಜsiಟಿθ. ಇಲ್ಲಿ θ= ಓರೆಕೋನ (ಕಿರಣ ಸಮತಲಗಳ ಜೊತೆ ಮಾಡುವ ಕೋನ). ಜ=ಸಮತಲಗಳ ಮಧ್ಯದ ಅಂತರ. ಆದರೆ ಒಂದೇ ಶ್ರೇಣಿಯ ಸಮತಲದಿಂದ ಪ್ರತಿಫಲನವಾಗಿ ರಚನಾತ್ಮಕ ವ್ಯತಿಕಿರಣ (ಕನ್ಸ್‍ಟ್ರಕ್ಟಿವ್ ಇಂಟರ್‍ಫಿಯರನ್ಸ್) ಆಗಬೇಕಾದರೆ ಅನುಸರಿಸಬೇಕಾದ ನಿಯಮ.
2ಜsiಟಿθ=ಟಿ λ		
					. . .(2)
ಇದು ಲಾವೇ ಸಮೀಕರಣಗಳಿಗೆ ಗಣಿತರೀತಿಯಿಂದ ಸರಿಸಮನಾಗಿರುತ್ತದೆ. ಇದನ್ನು ಬ್ರ್ಯಾಗ್ ಸಮೀಕರಣವೆನ್ನುತ್ತಾರೆ.

	ಎಕ್ಸ್‍ಕಿರಣನಮನ ಛಾಯಾಚಿತ್ರದ ಸೂಕ್ಷ್ಮಪರಿಶೀಲನೆಯಿಂದ ಹರಳಿನ ರಚನೆಯನ್ನು ಕಂಡುಹಿಡಿಯಬಹುದು. ಕೋಶದ ಪರಿಮಾಣಗಳನ್ನು ನಮನ ಗರಿಷ್ಠಗಳ (ಡಿಫ್ರಾಕ್ಷನ್ ಮ್ಯಾಕ್ಸಿಮಂ) ಸ್ಥಾನದಿಂದಲೂ ಹರಳಿನ ಸಮಾಂಗತೆಯನ್ನು ನಮನ ಗರಿಷ್ಠಗಳ ವಿತರಣೆಯಿಂದಲು ಕಂಡುಹಿಡಿಯಬಹುದು. ಪ್ರತಿಯೊಂದು h, ಞ, ಟ  ಪ್ರತಿಫಲನದ ಸಾಪೇಕ್ಷ ತೀಕ್ಷ್ಣತೆ ಕೋಶದಲ್ಲಿನ ಪರಮಾಣು ವಿತರಣೆಯನ್ನು ಅವಲಂಬಿಸಿದೆ. (h, ಞ, ಟ ಎಂಬುವು ಸಮತಲಗಳನ್ನು ಕ್ರಮವಾಗಿ ಸೂಚಿಸಲು ಮಿಲ್ಲರ್ ಸೃಷ್ಟಿಸಿದ ಮಿಲ್ಲರ್ ಸೂಚ್ಯಂಕಗಳು). ಸಾಧಾರಣವಾಗಿ ಚದರಿಸುವ ದ್ರವ್ಯದ ವಿತರಣೆಗೂ ಅದು ಉಂಟುಮಾಡುವ ನಮನ ಮಾದರಿಗೂ ಪರಸ್ಪರ ಸಂಬಂಧವಿದೆ. ಇವುಗಳಲ್ಲಿ ಯಾವುದಾದರೂ ಒಂದು ಪೂರ್ಣವಾಗಿ ಗೊತ್ತಿದ್ದರೆ ಮತ್ತೊಂದನ್ನು ಪೂರ್ಣವಾಗಿ ಕಂಡುಹಿಡಿಯಬಹುದು ಮತ್ತು ಗುಣಿಸಬಹುದು. ಇದನ್ನು ಮಾಡುವ ಗಣಿತ ಸಾಧನಕ್ಕೆ ಪೂರಿಯರ್ ಪರಿವರ್ತನ (ಟ್ರಾನ್ಸ್‍ಫಾರ್ಮ್) ಎನ್ನುತ್ತಾರೆ.
h, ಞ, ಟ=ಪ್ರತಿಫಲನ ಸೂಚಿ: (h, ಞ, ಟ)=h ಞ ಟ ಪ್ರತಿಫಲನದಲ್ಲಿ ರಿ ಪರಮಾಣುವಿನ ಚದರಿಸುವ ಶಕ್ತಿ. ಈ(h, ಞ, ಟ)= h ಞ ಟ ಪ್ರತಿಫಲನದಲ್ಲಿ ಚದರಿಸಲ್ಪಟ್ಟ ವಿಕಿರಣದ ಕಂಪನ ವೈಶಾಲ್ಯ ಅಥವಾ ರಚನಾಪವರ್ತನ. x, ಥಿ, z    x, ಥಿ, z ಎಂಬುವು ಏಕಕೋಶದಲ್ಲಿ ಒಂದು ಬಿಂದುವಿನ ಸ್ಥಾನ ಸೂಚಿಸುವ ಸ್ಥಾನಾಂಕಗಳು. ಗಿ=ಏಕಕೋಶದ ಗಾತ್ರ.   b=ಏಕಕೋಶದ x, ಥಿ, z ಸ್ಥಾನಾಂಕ ಸೂಚಿತಜಾಗದಲ್ಲಿನ ಸಾಂದ್ರತೆಗಳಾದರೆ ಹರಳಿನಲ್ಲಿ ದ್ರವ್ಯ ವಿತರಣೆ ಮತ್ತು ಅದು ಉಂಟುಮಾಡುವ ನಮನದ ಸಂಬಂಧಕೊಡುವ ಫೋರೆಯರ್ ಪರಿವರ್ತನ    

Fhkl=Σbhkl exp 2πi (hx+ky+lz)							. . .(3)
           1
bxyz=       ΣΣΣ Fhkl exp [-2 πi (hx+ky+lz)]							. . .(4)
          V		
ಬೇರೆ ಬೇರೆ ಪರಮಾಣುಗಳ ಚದರಿಸುವ ಶಕ್ತಿ ಗೊತ್ತಿದೆ. ಆದ್ದರಿಂದ ಒಂದು ಹರಳಿನ hಞಟ ಪ್ರತಿಫಲನದಿಂದಾಗುವ ನಮನಕಿರಣದ ಕಂಪನವೈಫಲ್ಯವನ್ನು (3) ರಿಂದ ಕಂಡುಹಿಡಿಯಬಹುದು. ಸಾಧಾರಣವಾಗಿ ಕಂಪನವೈಶಾಲ್ಯ ಸಂಕೀರ್ಣವಾಗಿರುತ್ತದೆ. ಅದರ ಪರಿಮಾಣ | ಈhಞಟ | ಮತ್ತು ದಶೆ (Фhಞಟ). ಒಂದು ಹರಳಿನಲ್ಲಿನ ವಿತರಣೆ ಗೊತ್ತಿದ್ದರೆ ಅದರಿಂದ ಬರಬಹುದಾದ ನಮನ ಮಾದರಿಯನ್ನು ಸುಲಭವಾಗಿ ಗುರುತಿಸಬಹುದು. ಆದರೆ ಒಂದು ನಮನ ಮಾದರಿಯಿಂದ ರಚನೆಯನ್ನು ಸುಲಭವಾಗಿ ಹಾಗೂ ಪೂರ್ಣವಾಗಿ ಕಂಡುಹಿಡಿಯಲು ಬರುವುದಿಲ್ಲ. ಕಾರಣವೇನೆಂದರೆ ನಮಗೆ ಕಂಪನವೈಶಾಲ್ಯ ಪ್ರಮಾಣ ಪತ್ರ ಗೊತ್ತಾಗುತ್ತದೆ. ದಶೆಯ ಬಗ್ಗೆ ನಮನಛಾಯಾಚಿತ್ರದಿಂದ ಎಳ್ಳಷ್ಟೂ ಗೊತ್ತಾಗುವುದಿಲ್ಲ. ಆದ್ದರಿಂದ ರಚನೆಯನ್ನು ಪತ್ತೆ ಹಚ್ಚುವಾಗ ಬೇರೆ ಬೇರೆ ದಾರಿಗಳನ್ನು ಅನುಸರಿಸಬೇಕಾಗುತ್ತದೆ.

	ಪರೀಕ್ಷಾ ಊಹೆ ಮತ್ತು ತಪ್ಪು ಸರಿಪಡಿಸುವ ವಿಧಾನ (ಟ್ರಯಲ್ ಅಂಡ್ ಎರ್ರರ್ ಮೆಥಡ್): ಛಾಯಾಚಿತ್ರದಲ್ಲಿ ಬರುವ ನಮನಬಿಂದುಗಳ ತೀಕ್ಷ್ಣತೆಯನ್ನು ಆ ಸಂದರ್ಭದಲ್ಲಿ ಬೇರೆ ಬೇರೆ ತಪ್ಪುಗಳಿಂದ ಉಂಟಾಗಬಹುದಾದ ತೀಕ್ಷ್ಣತಾ ವ್ಯತ್ಯಾಸವನ್ನು ತಿದ್ದಿ ಅಳತೆಮಾಡುವುದು ಮೊದಲಹೆಜ್ಜೆ. ನಮನ ಬಿಂದುಗಳ ವಿತರಣೆ ಮತ್ತು ಅವುಗಳ ಇರುವಿಕೆ, ಇಲ್ಲದಿರುವಿಕೆಗಳಿಂದ ಒಂದು ಪೂರ್ವಭಾವೀ ರಚನೆಯನ್ನು ಗೊತ್ತುಮಾಡಬೇಕು. ಅನಂತರ ಈ ರಚನೆಯಿಂದ ದಶೆಗಳನ್ನು ಲೆಕ್ಕದಲ್ಲಿಟ್ಟುಕೊಂಡು ರಚನಾಪವರ್ತನವನ್ನು ಗುಣಿಸಬೇಕು. ಪ್ರಾಯೋಗಿಕವಾಗಿ ಕಂಡುಹಿಡಿದಿದ್ದನ್ನೂ ತಾತ್ತ್ವಿಕವಾಗಿ ಗುಣಿಸಿದ್ದನ್ನೂ ಹೋಲಿಸಿ ಪೂರ್ವಭಾವೀ ರಚನೆಯನ್ನು ಸ್ವಲ್ಪ ಸ್ವಲ್ಪ ವ್ಯತ್ಯಾಸಮಾಡಿ ಎರಡೂ ಒಂದೇ ಬರುವವರೆಗೆ ಪುನರಾವರ್ತಿಸಬೇಕು. ಈ ರೀತಿ ಬಂದುದನ್ನು ಮುಂದಿನ ಪರೀಕ್ಷಾರಚನೆಯಲ್ಲಿ ಅಳವಡಿಸುವುದರಿಂದ ಹರಳಿನ ರಚನೆಯನ್ನು ಕಂಡುಹಿಡಿಯಬಹುದು.

	ಹರಳುಗಳ ರಚನೆಯನ್ನು ಕಂಡುಹಿಡಿಯಲು ಇತರ ಕೆಲವು ವಿಧಾನಗಳಿವೆ: ಸುಮಾರಾಗಿ ಒಂದೇ ರಚನೆ ಇರಬಹುದಾದ ಬೇರೆ ಬೇರೆ ಹರಳುಗಳ ನಮನ ಚಿತ್ರಗಳನ್ನು ತುಲನೆ ಮಾಡುವುದು. ಒಂದು ಹರಳಿನಲ್ಲಿನ ಹೆಚ್ಚಿನ ಪರಮಾಣು ಸಂಖ್ಯೆಯುಳ್ಳ ಅಣುವಿನ ಸ್ಥಾನವನ್ನು ಕೇಂದ್ರವಾಗಿ ಗಣಿಸಿ ದಶೆಗಳನ್ನು ಕಂಡುಹಿಡಿದು ಇತರ ಅಣುಗಳ ಸ್ಥಾನಗಳನ್ನು ನಿರ್ಧರಿಸಬಹುದು. ನೇರವಾದ ಫೂರಿಯರ್ ವಿಶ್ಲೇಷಣೆ ಪ್ಯಾಟರ್‍ಸನ್ ವಿಶ್ಲೇಷಣೆ.

	ಎಕ್ಸ್ಸ್‍ಕಿರಣನಮನವನ್ನು ದಾಖಲೆ ಮಾಡುವಾಗ ನಾನಾ ರೀತಿಯಲ್ಲಿ ಛಾಯಾಚಿತ್ರಕಾಗದವನ್ನು ಅಳವಡಿಸಬಹುದು. ಬೇರೆಬೇರೆ ರೀತಿಯ ಛಾಯಾಗ್ರಾಹಕಗಳನ್ನು ಉಪಯೋಗಿಸಬೇಕು. ಪ್ರತಿಯೊಂದು ಛಾಯಾಗ್ರಾಹಕದಿಂದ ಬರುವ ಚಿತ್ರಗಳು ಹರಳಿನ ರಚನೆಯ ಬಗ್ಗೆ ಬೇರೆ ಬೇರೆ ಮಟ್ಟದ ತಿಳಿಯನ್ನು ನೀಡುತ್ತದೆ.

	ಪೌಡರ್ ಕ್ಯಾಮೆರಾ: ಡಿಬಾಯ್, ಪೆರರ್ ಮತ್ತು ಹಲ್ ಎಂಬುವರು ನಿರ್ಮಿಸಿದ ಈ ಕ್ಯಾಮರಾದಿಂದ ಮುಖ್ಯವಾಗಿ ಏಕಕೋಶ ಆಯಾಮಗಳನ್ನು ಮಾತ್ರ ತಿಳಿಯಲು ಸಾಧ್ಯ. ಹರಳನ್ನು ಅರೆದು ಬಹು ಸೂಕ್ಷ್ಮಕಣಗಳನ್ನಾಗಿ ಮಾಡಿ ಅನಂತರ ಅಂಟಿಸುವ ವಸ್ತುವಿನ ಸಹಾಯದಿಂದ ಒಂದು ಕಡ್ಡಿಯಂತೆ ಮಾಡಬೇಕು. ಈಗ ಇದರ ಮೇಲೆ ಎಕ್ಸ್‍ಕಿರಣಗಳನ್ನು ಹಾಯಿಸಿದಾಗ ಛಾಯಾಚಿತ್ರಕಾಗದದ ಮೇಲೆ ನಮನಗೆರೆಗಳನ್ನು ಕಾಣುತ್ತೇವೆ. ಈ ಬಗೆಯ ಚಿತ್ರೀಕರಣದಿಂದ ಹರಳಿನ ಸಾಮಾನ್ಯ ರಚನೆಯನ್ನು ಕಂಡುಹಿಡಿಯಬಹುದು. ಇದರಲ್ಲಿ ಮುಂಭಾಗ ಪ್ರತಿಫಲನ ಹಾಗೂ ಹಿಂಭಾಗ ಪ್ರತಿಫಲನ - ಈ ಎರಡು ರೀತಿಯಿಂದಲೂ ಚಿತ್ರವನ್ನು ಗ್ರಹಿಸಿಬಹುದು.   

	ಲಾವೇ ವಿಧಾನ: ಇಲ್ಲಿ ವಸ್ತುವಿನ ಮೇಲೆ ಅವಿಚ್ಛಿನ್ನ ಎಕ್ಸ್‍ಕಿರಣವನ್ನು ಹಾಯಿಸುತ್ತಾರೆ. ನಮನಗೊಂಡ ಕಿರಣಗಳನ್ನು ಒಂದು ಸಮತಲ ಛಾಯಾಫಲಕದ ಮೇಲೆ ಗ್ರಹಿಸುತ್ತಾರೆ. ನಮನಚಿತ್ರದಲ್ಲಿ ವಸ್ತುವಿನ ಸಮಾಂಗತೆಯನ್ನು ಅವಲಂಬಿಸಿರುವ ಚುಕ್ಕೆಗಳ ವಿತರಣೆಯನ್ನು ಕಾಣಬಹುದು. ಇದರ ವಿಶ್ಲೇಷಣೆ ಸ್ವಲ್ಪ ಕಷ್ಟ. ಆದ್ದರಿಂದ ಹರಳಿನ ಸಮಾಂಗತೆಯನ್ನು ಪಡೆಯಲು ಮಾತ್ರ ಈ ವಿಧಾನವನ್ನು ಬಳಸಬಹುದು.

	ಬ್ರ್ಯಾಗ್‍ನ ಎಕ್ಸ್‍ಕಿರಣ ರೋಹಿತ ಮಾಪಕ: ಇಲ್ಲಿ ಛಾಯಾಫಲಕದ ಮೇಲೆ ನಮನವನ್ನು ಗ್ರಹಿಸುವ ಬದಲು ಬೇರೆ ಬೇರೆ ಪತನಕೋನಗಳಲ್ಲಿ ಎಕ್ಸ್ಸ್‍ಕಿರಣಗಳನ್ನು ಹಾಯಿಸಿ ನಮನ ಕಿರಣ ಗರಿಷ್ಠಗಳನ್ನು ಗೈಗರ್ ಗುಣಕಗಳಿಂದ ನೇರವಾಗಿ ಪತ್ತೆ ಹಚ್ಚುತ್ತಾರೆ. ಇದಕ್ಕೆ ದೊಡ್ಡದಾದ ನಿರ್ದಿಷ್ಟ ಮುಖಗಳುಳ್ಳ ಹರಳಿನ ಅವಶ್ಯಕತೆ ಇರುತ್ತದೆ.

	ತಿರುಗುವ ಹರಳಿನ ವಿಧಾನ: ಇಲ್ಲಿ ಯಾಂತ್ರಿಕವಾಗಿ ತಿರುಗುವ ಹರಳಿನ ಮೇಲೆ ಎಕ್ಸ್‍ಕಿರಣ ಹಾಯಿಸಿದಾಗ ನಮನಗೊಂಡ ಕಿರಣಗಳನ್ನು ಹರಳಿನ ತಿರುಗುವ ಅಕ್ಷಕ್ಕೆ ಸಮಾನಾಂತರವಾಗಿ ವರ್ತುಲ ಸ್ತಂಭಾಕಾರದಲ್ಲಿ ಹರಳಿನ ಕೇಂದ್ರವಾಗಿರುವಂತೆ ಛಾಯಾಚಿತ್ರಕಾಗದವನ್ನು ಅಳವಡಿಸಲಾಗಿರುತ್ತದೆ. ನಮನವನ್ನು ಸಮತಲರೇಖಾಫಲಕದ ಮೇಲೂ ಪಡೆಯಬಹುದು. ಈ ಮಾದರಿಯ ಗ್ರಹಣದಿಂದ ಹರಳಿನ ಸಮಾಂಗತೆಯ ಬಗ್ಗೆ ಹರಳಿನ ಏಕಕೋಶ ಆಯಾಮ, ಏಕಕೋಶ ಮುಖಗಳು ಮಾಡುವ ಕೋನದ ಬಗ್ಗೆ ಮಾಹಿತಿ ಗಳಿಸಬಹುದು.

	ಪುರಸ್ಸರಣ ವಿಧಾನ (ಪ್ರಿಸೆಶ್ಯನ್ ಮೆಥಡ್): ಇಲ್ಲಿ ಹರಳನ್ನು ನಿರ್ದಿಷ್ಟಕೋನಗಳ ಮಧ್ಯೆ ಎಕ್ಸ್‍ಕಿರಣದ ಅಕ್ಷದ ಮೇಲೆ ತೂಗಾಡುವಂತೆ ಮಾಡುತ್ತಾರೆ. ಈ ವಿಧಾನದಲ್ಲಿ ಬೇರೆ ಬೇರೆ ಪ್ರತಿಫಲನಗಳು ದೂರದೂರಕ್ಕೆ ವಿಭಜಿಸಲ್ಪಡುವುದರಿಂದ ಹರಳಿನ ಬಗ್ಗೆ ಸುಲಭವಾಗಿ ಮಾಹಿತಿ ಪಡೆಯಬಹುದು. ಈ ವಿಧಾನದಿಂದ ಹರಳಿನ ಕೋಶ ಆಯಾಮ ಮತ್ತು ಸಮಾಂಗತೆಗಳ ಬಗೆಗಿನ ವಿಚಾರ ತಿಳಿಯುತ್ತದೆ. 

	 ವೈಸೆನ್‍ಬರ್ಗ್‍ರವರ ಚಲಿಸುವ ಛಾಯಾಫಲಕ ವಿಧಾನ: ಇದರಲ್ಲಿ ಹರಳನ್ನು ಮಂದವಾಗಿ ತಿರುಗುವಂತೆ ಮಾಡುವುದಲ್ಲದೆ ಅದಕ್ಕೆ ಹೊಂದುವಂತೆ ಛಾಯಾಫಲಕವೂ ಚಲಿಸುವಂತೆ ಮಾಡಿರುತ್ತಾರೆ. ಇದರಿಂದ ಒಂದೇ ಸ್ಥಳದಲ್ಲಿ ಬೀಳಬಹುದಾದ ಬೇರೆ ಬೇರೆ ನಮನಕಿರಣಗಳನ್ನು ಹರಡುವಂತೆ ಮಾಡಬಹುದು. ಹೀಗೆ ಮಾಡುವುದರಿಂದ ಬರುವ ಒಂದು hಞಟ ಪ್ರತಿಫಲನವನ್ನು ಎರಡು ಕೋನಗಳಿಂದ ಸೂಚಿಸಬೇಕಾಗುತ್ತದೆ. ಈ ವಿಧಾನದಿಂದ ಹರಳಿನ ಸಮಾಂಗತೆಯನ್ನು ಸುಲಭವಾಗಿಯೂ ಪೂರ್ಣವಾಗಿಯೂ ಕಂಡುಹಿಡಿಯಬಹುದು.

	ಮೇಲೆ ಹೇಳಿದ ವಿಧಾನಗಳಲ್ಲದೆ ವಿಮುಖ ಕಿರಣವಿಧಾನ. ಸೂಕ್ಷ್ಮಕಿರಣ ವಿಧಾನ ಇವೇ ಮೊದಲಾದ ಇತರ ವಿಧಾನಗಳೂ ಇವೆ.

	ಎಕ್ಸ್‍ಕಿರಣನಮನ ಹರಳಿನ ರಚನೆಯನ್ನೂ ಪತ್ತೆ ಹಚ್ಚುವಲ್ಲಿ ಸೂಕ್ಷ್ಮದರ್ಶಕವೆಂಬಂತಿದೆ. ಅಲ್ಲದೆ ಇದು ಹರಳಿನಲ್ಲಿರಬಹುದಾದ ಅಪರಿಪೂರ್ಣತೆ (ಇಂಪರ್ಫೆಕ್ಷನ್), ಕ್ರಮಾಕ್ರಮ ವ್ಯತ್ಯಾಸ (ಆರ್ಡರ್ ಡಿಸಾರ್ಡರ್ ಚೇಂಜಸ್) ಹಾಗೂ ಹರಳು ಕಟ್ಟಡದಲ್ಲಿನ ದೋಷಗಳನ್ನು (ಪ್ಯಾಕಿಂಗ್ ಡಿಫೆಕ್ಟ್ಸ್) ಕಂಡುಹಿಡಿಯುವಲ್ಲಿ ಪರಿಣಾಮಕಾರಿ ಅಸ್ತ್ರವಾಗಿದೆ.  		

	(ಜೆ.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ